Category: ದಕ್ಷಿಣ ಕನ್ನಡ

ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ; ದೇವರ ವಾಕ್ಯವನ್ನು ಧ್ಯಾನಿಸಿ ಜೀವನದಲ್ಲಿ ಪಾಲಿಸಿರಿ: ಅಲೋಶಿಯಸ್ ಪಾವ್ ಡಿ ಸೋಜಾ

ಕಾರ್ಕಳ: ಕಾರ್ಕಳದ ಅತ್ತೂರಿನ ಐತಿಹಾಸಿಕ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ 21 ರಂದು ಭಾನುವಾರ ವಿಜೃಂಭಣೆಯಿಂದ ಆರಂಭಗೊಂಡಿತು. ಮಹೋತ್ಸವವು ಜ. 21 ರಿಂದ 26 ರವೆರೆಗೆ ನಡೆಯಲಿದೆ. ಜ. 21 ರಂದು ಭಾನುವಾರ ಬೆಳಗ್ಗೆ ಪುಣ್ಯಕ್ಷೇತ್ರದ ಸಂತ…

ಕಾರ್ಕಳ ಆನೆಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವದಲ್ಲಿ ಗಮನ ಸೆಳೆದ ಭೋಜನ ವ್ಯವಸ್ಥೆ

ಕಾರ್ಕಳ: ಐತಿಹಾಸಿಕ ಆನೆಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಜ.18ರಿಂದ 22ರವರೆಗೆ ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನು ವೀಕ್ಷಿಸಲು ನಾಡಿನ ಎಲ್ಲಡೆಯಿಂದ ಭಕ್ತಸಾಗರ ಕಾರ್ಕಳದತ್ತ ಹರಿದು ಬರುತ್ತಿದೆ. ಪ್ರತಿನಿತ್ಯ ಸುಮಾರು 25 ರಿಂದ 35 ಸಾವಿರ ಜನರು ಆನೆಕೆರೆ ಬಸದಿಯ ಪಂಚಲ್ಯಾಣ ಮಹೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.…

ನಿಟ್ಟೆ: ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾಸೈನ್ಸ್ ನ ಕೈಗಾರಿಕಾ ಉಪಯುಕ್ತತೆಯ ಕುರಿತ ಬೋಧಕ ಅಭಿವೃದ್ಧಿ ಕಾರ್ಯಾಗಾರ

ಕಾರ್ಕಳ: ಜ್ಞಾನ ವಿನಿಮಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ,ನಿಟ್ಟೆ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾಸೈನ್ಸ್ ವಿಭಾಗವು ಜ.16 ರಿಂದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾಸೈನ್ಸ್ ನ ಕೈಗಾರಿಕಾ ಉಪಯುಕ್ತತೆಯ ಕುರಿತು ಐದು ದಿನಗಳ…

ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವ: ಮಂದಿರಗಳು ನಮ್ಮ ಸಂಸ್ಕೃತಿಯ ಕೇಂದ್ರಬಿಂದು:ಜೈನಮುನಿ 108 ಅಮರಕೀರ್ತಿ ಮುನಿಮಹಾರಾಜ್

ಕಾರ್ಕಳ: ಮಂದಿರಗಳು ನಮ್ಮ ಸಂಸ್ಕಾರದ ಕೇಂದ್ರಬಿಂದು ಅವುಗಳ ಜೀರ್ಣೋದ್ದಾರದಿಂದ ನಮ್ಮ ಆತ್ಮದ ಜೀರ್ಣೋದ್ಧಾರವಾಗುತ್ತದೆ.ಸಂಸ್ಕೃತಿ ಇಲ್ಲವಾದರೆ ನಮ್ಮ ಅಸ್ತಿತ್ವವೇ ಇರಲು ಸಾಧ್ಯವಿಲ್ಲ ಎಂದು 108 ಅಮರಕೀರ್ತಿ ಜೈನಮುನಿಗಳು ಹೇಳಿದರು ಅವರು ಕಾರ್ಕಳದ ಆನೆಕೆರೆ ಕೆರೆ ಬಸದಿಯ ಜೀರ್ಣೋದ್ಧಾರ ಪ್ರಯುಕ್ತ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವದ…

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ಸಂತ್ರಸ್ತನಿಗೆ ಸರ್ಕಾರದಿಂದ ಪರಿಹಾರ ಹಣ ವಿತರಣೆ

ಮಂಗಳೂರು : ನಾಗುರಿ ಬಳಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ತನಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಧನ ವಿತರಿಸಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಗೆ 2 ಲಕ್ಷ ರೂಪಾಯಿ ಪರಿಹಾರ ಹಣ ವಿತರಿಸಲಾಯಿತು.…

ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಏರೋಕ್ಲಬ್ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ಜ. 3 ಮತ್ತು 4 ರಂದು ಐಐಟಿ ಚೆನ್ನೈನಲ್ಲಿ ನಡೆದ ಪ್ರತಿಷ್ಠಿತ ಬೋಯಿಂಗ್ ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆರು ಮಂದಿಯ ಏರೋಕ್ಲಬ್ ವಿದ್ಯಾರ್ಥಿ ತಂಡವು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು…

ಕರಾವಳಿಯ ಸಾಂಪ್ರದಾಯಿಕ ಕೋಳಿ ಅಂಕ ಇನ್ನುಮುಂದೆ ಅಬಾಧಿತ: ಜೂಜಿಗೆ ಅವಕಾಶವಿಲ್ಲ

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಗ್ರಾಮೀಣ ಆಟವಾಗಿರುವ ಕೋಳಿ ಅಂಕ ಇನ್ನುಮುಂದೆ ಅಕ್ರಮವಲ್ಲ ಬದಲಾಗಿ ಕಾನೂನು ಚೌಕಟ್ಟಿನೊಳಗೆ ಅದನ್ನು ನಡೆಸಲು ಅನುಮತಿ ನೀಡಲಾಗಿದೆ. ಈ ಹಿಂದೆ ಸಾಂಪ್ರದಾಯಿಕ ಕೋಳಿ ಅಂಕ ನಡೆಸಲು ಅನುಮತಿ ನೀಡಬೇಕೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ…

ಕಾರ್ಕಳ ಆನೆಕೆರೆ ಬಸದಿಯ ಪಂಚ ಕಲ್ಯಾಣ ಮಹೋತ್ಸವವು ಕಾರ್ಕಳದ ಉತ್ಸವವಾಗಲಿ: ಡಾ. ಎಂ ಎನ್ ರಾಜೇಂದ್ರ ಕುಮಾರ್

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಆನೆಕೆರೆಯ ಚತುರ್ಮುಖ ಕೆರೆ ಬಸದಿಯು ಸಂಪೂರ್ಣವಾಗಿ ಜೀರ್ಣೋದ್ಧಾರಗೊಂಡು ಇದೀಗ ಪಂಚಕಲ್ಯಾಣ ಮಹೋತ್ಸವಕ್ಕೆ ಸಜ್ಜಾಗಿದೆ. ಇದು ಕೇವಲ ಜೈನ ಸಮುದಾಯದ ಕಾರ್ಯಕ್ರಮವಲ್ಲ ಬದಲಾಗಿ ಇದು ಕಾರ್ಕಳದ ಸಮಸ್ತ ಜನತೆಯ ಉತ್ಸವವಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ…

ಜ.21ರಿಂದ 26ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ

ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರ ಇದರ ವಾರ್ಷಿಕ ಮಹೋತ್ಸವ ಜ. 21ರಿಂದ 26ರ ವರೆಗೆ ನಡೆಯಲಿದ್ದು, 6 ದಿನಗಳ ಉತ್ಸವದ ಅವಧಿಯಲ್ಲಿ ಕೊಂಕಣಿ ಭಾಷೆಯಲ್ಲಿ 45, ಕನ್ನಡ ಭಾಷೆಯಲ್ಲಿ 3 ಒಟ್ಟು 48 ಬಲಿ ಪೂಜೆಗಳು…

ಶಬರಿಮಲೆಯಲ್ಲಿ ನಾಪತ್ತೆಯಾಗಿದ್ದ ಕಾರ್ಕಳದ ಅಯ್ಯಪ್ಪ ಮಾಲಾಧಾರಿ ಯುವಕ ಪತ್ತೆ

ಕಾರ್ಕಳ: ಶಬರಿಮಲೆಗೆ ಹೋಗಿದ್ದ ಅಯ್ಯಪ್ಪ ಮಾಲಾಧಾರಿ ಆದಿತ್ಯ ಶೆಟ್ಟಿಗಾರ್ ಎಂಬವರು ಅಯ್ಯಪ್ಪನ ದರ್ಶನ ಪಡೆದು ಮರಳುವಾಗ ವಿಪರೀತ ಜನಸಂದಣಿಯಿಂದ ಬುಧವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರು ಪತ್ತೆಯಾಗಿದ್ದು ಊರಿನತ್ತ ಮರಳಿ ಬರುತ್ತಿದ್ದಾರೆ ಎಂದು ಜೋಗಿನಕೆರೆ ಅಯ್ಯಪ್ಪ ಸೇವಾ ಸಮಿತಿಯ ಗುರು ಸ್ವಾಮಿ…