Category: ದಕ್ಷಿಣ ಕನ್ನಡ

ಆ.15 ರಂದು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಮೈಸೂರು ಅರಮನೆಯ ಯದುವೀರ ಕೃಷ್ಣದತ್ತ ಒಡೆಯರ್ ಆಗಮನ -ನೂತನವಾಗಿ ನಿರ್ಮಾಣಗೊಂಡಿರುವ “ರಾಜ ಸಭಾಂಗಣ” ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಆಗಸ್ಟ್ 15 ರಂದು ಮೈಸೂರು ಅರಮನೆಯ ಶ್ರೀಮಾನ್ ಮಹರಾಜರಾದ ಯದುವೀರ ಕೃಷ್ಣದತ್ತ ಒಡೆಯರ್ ಆಗಮಿಸಲಿದ್ದಾರೆ. ಅದೇ ದಿನ ಮೈಸೂರಿನಿಂದ ಹೊರಟು ಬೆಳಿಗ್ಗೆ 11:00 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ…

ಮೂಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ- ಅಧ್ಯಕ್ಷರಾಗಿ ಪೂರ್ಣಿಮಾ ಉಪಾಧ್ಯಕ್ಷರಾಗಿ ಚಂದ್ರಿಕಾ ಕೋಟ್ಯಾನ್ ಆಯ್ಕೆ

ಮೂಲ್ಕಿ : ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ನ ಮುಂದಿನ ಎರಡುವರೆ ವರ್ಷಗಳ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದ್ದು ಎರಡು ಪಕ್ಷದ ಬೆಂಬಲಿಗರು ಪಂಚಾಯಿತಿನ ಹೊರಗಡೆ ಜಮಾಯಿಸಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಹಳೆಯಂಗಡಿ…

ಮೂಡುಬಿದಿರೆ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಎಕ್ಸಲೆಂಟ್‌ನ ಇಬ್ಬರಿಗೆ ಪ್ರಥಮ ಸ್ಥಾನ

ಮೂಡುಬಿದಿರೆ: ಕನ್ನಡ ವಿಧ್ಯಾರ್ಥಿ ಪರಿಷತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಪುಣ್ಯಭೂಮಿ ಭಾರತ” ಎಂಬ ವಿಷಯದಡಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದೆರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿನಿ ಓಮನ ಪದವಿಪೂರ್ವ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಮುಕ್ತ ವಿಭಾಗದಲ್ಲಿ…

ಮೂಡಬಿದ್ರೆ ತಾಲೂಕಿನ 9 ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ: ಆ. 17 ರಿಂದ ಚುನಾವಣಾ ಪ್ರಕ್ರಿಯೆ ಆರಂಭ

ಮೂಡಬಿದಿರೆ: ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಅವಧಿ ಮುಕ್ತಾಯವಾಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎರಡನೆಯ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಿಗದಿಪಡಿಸಿದ್ದಾರೆ. ಮೂಡುಬಿದಿರೆ ತಾಲೂಕಿನ ಒಟ್ಟು 9 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಆಗಸ್ಟ್…

ಕಲ್ಲಮುಂಡ್ಕೂರು: ಘನತ್ಯಾಜ್ಯ ಘಟಕ ಉದ್ಘಾಟನೆ

ಮೂಡಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಗೇರಪದವು ಎಂಬಲ್ಲಿ ಸುಮಾರು 18 ಲಕ್ಷ ಅನುದಾನದಲ್ಲಿ ಘನತ್ಯಾಜ್ಯ ಘಟಕ ಮತ್ತು ಸ್ವಚ್ಛತಾ ವಾಹನದ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತಿಯ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೇಶವ ಪೂಜಾರಿ…

ಬಾಡಿಗೆದಾರ ಹಾಗೂ ಮಾಲೀಕರ ನಡುವಿನ ಜಟಾಪಟಿ: ಮೂಡಬಿದಿರೆ ಅಮರಶ್ರೀ ಚಿತ್ರಮಂದಿರ ಬಂದ್! ಪರವಾನಗಿ ನವೀಕರಿಸದ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನ ಸ್ಥಗಿತಗೊಳಿಸಿ ಡಿಸಿ ಆದೇಶ

ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಮೂಡಬಿದಿರೆ ಪರಿಸರದಲ್ಲಿ ಮನೆಮಾತಾಗಿದ್ದ ಅಮರಶ್ರೀ ಚಿತ್ರಮಂದಿರದ ಪರವಾನಿಗೆ ನವೀಕರಣವಾಗದ ಹಿನ್ನೆಲೆಯಲ್ಲಿ ತಕ್ಷಣವೇ ಎಲ್ಲಾ ಚಲನಚಿತ್ರ ಪ್ರದರ್ಶನಗಳನ್ನು ಸ್ಥಗಿತಗೊಳಿತಗೊಳಿಸುವಂತೆ ಹಾಗೂ ಹಾಲಿ ಪರವಾನಿಗೆಯನ್ನು ರದ್ದುಪಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬಾಡಿಗೆದಾರ ಹಾಗೂ ಚಿತ್ರಮಂದಿರದ ಮಾಲಕರ…

ಪಡುಪಣಂಬೂರು: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕುಸುಮಾ ಚಂದ್ರಶೇಖರ್ ಆಯ್ಕೆ

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಪಡುಪಣಂಬೂರು ಗ್ರಾಮ ಪಂಚಾಯತ್ ಗೆ ಮುಂದಿನ ಎರಡುವರೆ ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಕುಸುಮಾ ಚಂದ್ರಶೇಖರ್ ಹಾಗೂ ಉಪಾಧ್ಯಕ್ಷರಾಗಿ ಹೇಮನಾಥ ಅಮಿನ್ ತೋಕೂರು ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿ ಲೋಕೇಶ್,…

ಮೂಲ್ಕಿ: ಆಟಿದ ನೆನಪು-2023 ಕಾರ್ಯಕ್ರಮ

ಮೂಲ್ಕಿ: . ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ, ತುಳು ಸಾಹಿತ್ಯ ಅಕಾಡೆಮಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್…

ಮೂಡುಬಿದಿರೆ ಎಕ್ಸಲೆಂಟ್‌ನ ವಿದ್ಯಾರ್ಥಿಗಳು ಸಿಎ ಪೌಂಢೇಶನ್ ಪರೀಕ್ಷೆಯಲ್ಲಿ ಉತ್ತೀರ್ಣ

ಮೂಡುಬಿದಿರೆ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಸಿ ಎ ಪೌಂಢೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸೆಲೆಂಟ್ ವಿದ್ಯಾಸಂಸ್ಠೆಯ ರಾಘವ್ 209 (ಅಜಯ್.ಕೆ ರಾಜೇಶ್ವರಿ ದಂಪತಿಗಳ ಪುತ್ರ) , ತರುಣ್ ಸಿಂಗ್ 242 (ಕೀಶೋರ್ ಸಿಂಗ್ ನರೇಂದ್ರ…

ತೋಕೂರು: ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಹಳೆಯಂಗಡಿ: ತೋಕೂರು ಮದ್ದೇರಿ ದೈವಸ್ಥಾನ ಜೀರ್ಣೋದ್ಧಾರದ ಪರಿಹಾರ ಕಾರ್ಯಕ್ರಮದ ಅಂಗವಾಗಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಹರಿದಾಸ್ ಭಟ್, ಅಧ್ಯಕ್ಷ ಪದ್ಮನಾಭ ಪಿ. ಆಚಾರ್ಯ, ಉಪಾಧ್ಯಕ್ಷ ಮೋಹನ್ ದಾಸ್, ಕಾರ್ಯದರ್ಶಿ ಹೇಮಾನಾಥ…