ಕಾಂತಾವರ ಕನ್ನಡ ಸಂಘದ ತಿಂಗಳ ಉಪನ್ಯಾಸ “ಅರಿವು ತಿಳಿವು” ಕಾರ್ಯಕ್ರಮ
ಕಾರ್ಕಳ : ಎಲ್ಲ ಉಪನಿಷತ್ತುಗಳ ಸಾರವನ್ನು ಹೊಂದಿರುವ ಛಾಂದೋಗ್ಯ ಉಪನಿಷತ್ತು ಮೋಕ್ಷದೆಡೆಗೆ ಸಾಗಲು ಪೂರಕವಾಗುವ ವಿವಿಧ ಉಪಾಸನಾ ವಿಧಿಗಳನ್ನು ತಿಳಿಸಿಕೊಡುತ್ತದೆ ಎಂಬುದಾಗಿ ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರಾಹುಲ್ ರಾಜಶೇಖರ ಭಟ್ ಹೇಳಿದರು. ಅವರು ಕನ್ನಡ ಸಂಘ…
