Category: ಸ್ಥಳೀಯ ಸುದ್ದಿಗಳು

ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿ ಗೆದ್ದ ಎಸ್ ವಿ ಟಿ ಯ ರಕ್ಷಾ: ಕುಸ್ತಿ ಪಂದ್ಯಾಟದಲ್ಲಿ ಸಾಕ್ಷಿ ಶೆಟ್ಟಿಗೆ ಕಂಚಿನ ಪದಕ

ಕಾರ್ಕಳ: ಶಿಕ್ಷಣ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ರಾಜ್ಯಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟದಲ್ಲಿ ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನ ರಕ್ಷಾ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್ ವಿ ಟಿ…

ಅ.20ರಂದು ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಬೃಹತ್ ಜವಳಿ ಮಳಿಗೆ ಲಕ್ಷ್ಮೀ ಸಿಲ್ಕ್ ಉದ್ಘಾಟನೆ: ಅಗಾಧ ಕಲೆಕ್ಷನ್ ಗಳ ಕಾರ್ಕಳದ ಏಕೈಕ ವಸ್ತ್ರ ಭಂಡಾರ: ಪ್ರತೀ ಖರೀದಿಗೆ 20 ಶೇಕಡಾ ವರೆಗೆ ವಿಶೇಷ ರಿಯಾಯಿತಿ

ಕಾರ್ಕಳ: ಜವಳಿ ವ್ಯವಹಾರದಲ್ಲಿ ಕಳೆದ ಒಂದು ದಶಕದಿಂದ ಕಾರ್ಕಳದಲ್ಲಿ ಮನೆಮಾತಾಗಿರುವ ಲಕ್ಷ್ಮೀ ಸಿಲ್ಕ್’ನ ಇನ್ನೊಂದು ಬೃಹತ್ ಜವಳಿ ಮಳಿಗೆಯು ಬಂಗ್ಲೆಗುಡ್ಡೆಯ ಸುಧರ್ಮ ಸುಧಾ ಬಿಲ್ಡಿಂಗ್ ನಲ್ಲಿ ಅ.20 ಭಾನುವಾರ ಬೆಳಗ್ಗೆ 9.45ಕ್ಕೆ ಉದ್ಘಾಟನೆಯಾಗಲಿದೆ. ನೂತನ ಲಕ್ಷ್ಮೀ ಸಿಲ್ಕ್ ಬೃಹತ್ ಜವಳಿ ಮಳಿಗೆಯನ್ನು…

ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆ ಕಾರ್ಕಳದ ವಿವಿಧೆಡೆ ಸಭೆ

ಕಾರ್ಕಳ: ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ವಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಿಟ್ಟೆ, ನಂದಳಿಕೆ, ಬೋಳ, ಕೆದಿಂಜೆ, ಬೆಳ್ಮಣ್, ದುರ್ಗಾ ಇನ್ನಾ ಹಾಗೂ ಮುಂಡ್ಕೂರು ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳ ಪಂಚಾಯತ್ ಸದಸ್ಯರೊಂದಿಗೆ…

ಕೇಂದ್ರ ಸರ್ಕಾರ ಅಕ್ಕಿ ನೀಡಿದರೂ, ಜನರಿಗೆ ವಿತರಿಸದೇ ಕಾಂಗ್ರೆಸ್ ಸರ್ಕಾರ ಜನಹಿತವನ್ನು ಮರೆತಿದೆ: ನವೀನ್ ನಾಯಕ್ ನಿಟ್ಟೆ

ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದುವರೆ ವರ್ಷಕ್ಕೇ ಸಂಪೂರ್ಣ ವಿಫಲವಾದ ಮೊದಲ ಸರ್ಕಾರ ಇದು. ಚುನಾವಣೆಗೆ ಮುನ್ನ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ನೀಡುವುದಾಗಿ ನಂಬಿಸಿ ಮೊಣಕೈಗೆ ಬೆಣ್ಣೆ ನೆಕ್ಕಿಸಿ, ಈಗ ಜನರ ಹಿತವನ್ನೇ ಮರೆತಿದೆ ಎಂದು…

ಕಿನ್ನಿಗೋಳಿ : ನಿಲ್ಲಿಸಿದ್ದ ಬೈಕ್ ಮೇಲೆ ಬಿದ್ದ ಮರ ಬಿದ್ದು ಹಾನಿ

ಕಿನ್ನಿಗೋಳಿ : ಮರದ ರೆಂಬೆಯೊಂದು ನಿಲ್ಲಿಸಿದ್ದ ಬೈಕ್‌ ಮೇಲೆ ಬಿದ್ದ ಘಟನೆ ಕಿನ್ನಿಗೋಳಿಯ ಮುಖ್ಯರಸ್ತೆಯ ರಾಜಾಂಗಣದ ಬಳಿ ನಡೆದಿದೆ. ಮುಖ್ಯ ರಸ್ತೆಯ ರಾಜಾಂಗಣ ಬಳಿಯ ಕಬ್ಬಿಣದ ಕೆಲಸಗಾರ ಸುಧಾಕರ ಆಚಾರ್ಯ ಕೆಲಸದ ಕೋಣೆ ಇದ್ದು, ಬೆಳ್ಳಿಗ್ಗೆ ಸುಧಾಕರ ಆಚಾರ್ಯ ಅವರು ತಮ್ಮ…

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ SLRM ಘಟಕದ ಸ್ವಚ್ಛತಾ ಕಾರ್ಯಕರ್ತೆಯರಿಗೆ ಸನ್ಮಾನ

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಗಾಂಧೀ ಜಯಂತಿ ಕಾರ್ಯಕ್ರಮದ ಅಂಗವಾಗಿ SLRM ಘಟಕದ ಸ್ವಚ್ಚತಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಕಳದ ಪೆರ್ವಾಜೆ ಶಾಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಐವರು ಸ್ವಚ್ಛತಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ Namathi…

ಅ.22ರಂದು ಉಡುಪಿ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ: ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಮಾಹಿತಿ

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವದ ಪ್ರಯುಕ್ತ ‘ರಜತ ಕ್ರೀಡಾ ಸಂಭ್ರಮ’ ವಾರ್ಷಿಕ ಕ್ರೀಡಾಕೂಟವನ್ನು ಅ.22ರಂದು ಅಜ್ಜರಕಾಡುವಿನಲ್ಲಿರುವ ಉಡುಪಿ ಜಿಲ್ಲಾ ಕ್ರೀಡಾಂಗಣ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು…

ಕಾರ್ಕಳದ ಚೇತನಾ ವಿಶೇಷ ಶಾಲೆಯ ಮಕ್ಕಳ ಕೈಯಿಂದ ಅರಳಿದ ದೀಪಾವಳಿ ಹಣತೆ: ಮಾರಾಟಕ್ಕೆ ಸಿದ್ದವಾಗಿವೆ ದೇವರ ಮಕ್ಕಳ ಹಣತೆಗಳು

ಕಾರ್ಕಳ: ಈ ಬಾರಿಯ ದೀಪಾವಳಿಗೆ ಚೇತನಾ ವಿಶೇಷ ಶಾಲೆಯ ವಿದ್ಯಾರ್ಥಿಗಳು ಬಣ್ಣ ಬಣ್ಣದ ಹಾಗೂ ವಿವಿಧ ಆಕಾರಗಳೊಂದಿಗೆ ಸಿದ್ಧಗೊಳಿಸಿದ ಮಣ್ಣಿನ ಹಣತೆಗಳನ್ನು ಶಾಲಾ ದಾನಿಗಳು ಹಾಗೂ ಹಿತೈಷಿಗಳು ಆದ ಕಾರ್ಕಳ ಕಮಲಾಕ್ಷ ಕಾಮತ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ, ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ಇಂತಹ…

ಕಾಂತಾವರ: ಕನ್ನಡ ಸಾಹಿತ್ಯ ಸಂಸ್ಕೃತಿ ಸಭಾ ಸಂಭ್ರಮ, ಶಿಕ್ಷಕರಿಗೆ ಸನ್ಮಾನ

ಕಾರ್ಕಳ: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರದಲ್ಲಿ ಜರಗಿದ ಕನ್ನಡ ಸಾಹಿತ್ಯ ಸಂಸ್ಕೃತಿ ಸಭಾ ಸಂಭ್ರಮದಲ್ಲಿ ಕಾಂತೇಶ್ವರ ಪ್ರೌಢ ಶಾಲೆಯ ದೈಹಿಕ ನಿವೃತ್ತ ಶಿಕ್ಷಕ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ತಂಡಗಳನ್ನು ಪ್ರತಿನಿಧಿಸಿದ ನಡಿಮಾರು ಗುತ್ತು ಪುಷ್ಪರಾಜ ಜೈನ್…

ಮಸೀದಿ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮಸೀದಿ ಆವರಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಸೀದಿ ಆವರಣಕ್ಕೆ ನುಗ್ಗಿ…