Category: ಸ್ಥಳೀಯ ಸುದ್ದಿಗಳು

ಹೆಬ್ರಿ: ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಸಾಲ ಕೊಡುವುದಾಗಿ ನಂಬಿಸಿ 2 ಲಕ್ಷಕ್ಕೂ ಅಧಿಕ ವಂಚನೆ

ಹೆಬ್ರಿ,ಜ.9: ವ್ಯಕ್ತಿಯೊಬ್ಬರಿಗೆ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಕರೆಮಾಡಿ ಸಾಲ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ದಲ್ಲಿ ಬೆಳಕಿಗೆ ಬಂದಿದೆ. ನಾಡ್ಪಾಲು ಗ್ರಾಮದ ಸೋಮೇಶ್ವರ ನಿವಾಸಿ ರಮೇಶ ಎಂಬವರಿಗೆ ಜ.2 ರಂದು ಬಜಾಜ್…

ಪರಶುರಾಮ ಥೀಮ್ ಪಾರ್ಕ್ ಪರಿಸರದ ಸ್ವಚ್ಚತೆಗೆ ಜಿಲ್ಲಾಡಳಿತ ಸೂಚನೆ: ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ಸ್ವಚ್ಚತಾ ಕಾರ್ಯ ಆರಂಭ

ಕಾರ್ಕಳ,ಜ.09: ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕಿನ ಆವರಣ ಹಾಗೂ ಸುತ್ತಮುತ್ತಲಿನಲ್ಲಿ ಹುಲ್ಲು ಹಾಗೂ ಕಳೆಗಿಡಗಳು ಬೆಳೆದಿದ್ದು, ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಈ ಯೋಜನೆಯ ಕಾಮಗಾರಿ ನಿರ್ವಹಿಸಿದ್ದ ನಿರ್ಮಿತಿ ಕೇಂದ್ರದ…

ಹೆಬ್ರಿ: ಸೇವಾ  ಸಂಗಮ ಶಿಶುಮಂದಿರದಲ್ಲಿ ಪ್ರತಿಭಾ ಪುರಸ್ಕಾರ

ಹೆಬ್ರಿ ,ಜ. 9: ಹೆಬ್ರಿ ಸೇವಾ ಸಂಗಮ ಶಿಶುಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ನಡೆಯಿತು. ಮುಖ್ಯಅತಿಥಿ ನಿವೃತ್ತ ಶಿಕ್ಷಕಿ ಅರುಣಾ.ಎಸ್ ಪ್ರಭು ಆಗಮಿಸಿ ಮಕ್ಕಳ ಜೊತೆ ಸಂಭಾಷಣೆ ಮಾಡಿ ಹಿತವಚನ ಹೇಳಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ…

ಕುಕ್ಕುಂದೂರು: ಮನೆಯ ಬಾಗಿಲು ಮುರಿದು ಬೆಳ್ಳಿ, ಚಿನ್ನಾಭರಣ ಕಳವು

ಕಾರ್ಕಳ, ಜ.8:ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದ ಕಳ್ಳರು ಬೆಳ್ಳಿಯ ಪೂಜಾ ಸಾಮಾಗ್ರಿಗಳು ಹಾಗೂ ಚಿನ್ನಾಭರಣವನ್ನು ಕಳವುಗೈದಿರುವ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪರಪು ಎಂಬಲ್ಲಿ ಜ.7 ರಂದು ನಡೆದಿದೆ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಶ್ರೀನಿವಾಸ ನಾರಾಯಣ ಮೂಲ್ಯ…

ಪರಶುರಾಮ ಥೀಮ್ ಪಾರ್ಕ್ ಈ ದುಸ್ಥಿತಿಗೆ ಬರಲು ಉದಯ ಶೆಟ್ಟಿ ಕುಕೃತ್ಯ ಕಾರಣ: ನಿಮ್ಮ ರಾಜಕೀಯ ಹಪಹಪಿಗೆ ಕಾರ್ಕಳದ ಅಭಿವೃದ್ಧಿಗೆ ಕಲ್ಲು ಹಾಕಬೇಡಿ:ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಸಲಹೆ

ಕಾರ್ಕಳ,ಜ.08: ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಪ್ರವಾಸೋದ್ಯಮವನ್ನು ಮೊಟಕುಗೊಳಿಸಲಾರ,ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ದುಸ್ಥಿತಿಗೆ ಮುನಿಯಾಲು ಉದಯ ಶೆಟ್ಟಿ ಕುಕೃತ್ಯವೇ ಕಾರಣ ಎಂದು ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಆರೋಪಿಸಿದ್ದಾರೆ.…

ಜ.11 ರಂದು ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ, ಹವಾಮಾನ ಆಧಾರಿತ ಕೃಷಿ ರೈತ ಜಾಗೃತಿ ಕಾರ್ಯಕ್ರಮ

ಕಾರ್ಕಳ,ಡಿ.8: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ “ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ” ಹಾಗೂ “ಹವಾಮಾನ ಆಧಾರಿತ ಕೃಷಿ – ರೈತ ಜಾಗೃತಿ ಕಾರ್ಯಕ್ರಮವವು ಜ.11ರ ಭಾನುವಾರ ಹೊಸ್ಮಾರು,…

ಕಾರ್ಕಳ :ರೋಟರಿಯಿಂದ ಹೊಸ ವರ್ಷಾಚಾರಣೆ ಮತ್ತು ವಿವಿಧ ವೃತ್ತಿಗಳ ಸಾಧಕರಿಗೆ ಸನ್ಮಾನ

ಕಾರ್ಕಳ,ಜ.8: ಅಂತರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿಯಲ್ಲಿ ಜನವರಿ ತಿಂಗಳನ್ನು ‘ವೃತ್ತಿ ಸೇವಾ ಮಾಸಾಚಾರಣೆ’ಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿನ್ನಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಸಂಸ್ಥೆಯವರಿಂದ ಕಾರ್ಕಳದ ವಿವಿಧ ಕ್ಷೇತ್ರಗಳಲ್ಲಿನ ಬೇರೆ ಬೇರೆ ವೃತ್ತಿಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ 9 ಜನರನ್ನು…

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 8 ಕಾಲುಸಂಕಗಳ ನಿರ್ಮಾಣಕ್ಕೆ ಸರಕಾರದ ಅನುಮೋದನೆ – ಶಾಸಕ ವಿ ಸುನಿಲ್‌ ಕುಮಾರ್

ಕಾರ್ಕಳ, ಜ.7: ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಶಾಸಕ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಪಶ್ಚಿಮ ಘಟ್ಟದ…

ಕಾರ್ಕಳ: ಅವೈಜ್ಞಾನಿಕ ಕಾಮಗಾರಿಯಿಂದ ಹದಗೆಟ್ಟ ರಸ್ತೆ, ನೀರು ಸರಬರಾಜು ವ್ಯವಸ್ಥೆ: ಸಾರ್ವಜನಿಕರಿಂದ ಪುರಸಭೆಗೆ ಕಚೇರಿಯಲ್ಲಿ ಪ್ರತಿಭಟನೆ

ಕಾರ್ಕಳ,ಜ. 7 : ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ನೀರು ಸರಬರಾಜು ಆಗುತ್ತಿದ್ದ ಪೈಪ್ ಲೈನ್ ಕಿತ್ತುಹೋಗಿ ನಳ್ಳಿನೀರು ಸಂಪರ್ಕ…

ಶಾಸಕರನ್ನು ಟೀಕಿಸುವ ಭರದಲ್ಲಿ ಸಭ್ಯತೆಯ ಎಲ್ಲೆ ಮೀರುತ್ತಿರುವ ಉದಯಕುಮಾರ್ ಶೆಟ್ಟಿ : ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್ ಆಕ್ರೋಶ

ಕಾರ್ಕಳ,ಜ.7: ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವನ್ನಾಗಿ ಬೆಳೆಸಬೇಕೆಂಬ ದೃಷ್ಟಿಯಲ್ಲಿ ಶಾಸಕ ವಿ ಸುನಿಲ್ ಕುಮಾರ್ ರವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣ ಮಾಡಿದ ಮಹತ್ವಕಾಂಕ್ಷಿ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಇಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಉದಯ್…