Category: ಸ್ಥಳೀಯ ಸುದ್ದಿಗಳು

ಹೆಬ್ರಿ: ಅಮೃತಭಾರತಿಯ ಶಿಕ್ಷಕಿ ಪಂಚಮಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ

ಹೆಬ್ರಿ,ಡಿ.19: ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ ರಜತಾದ್ರಿ ಮಣಿಪಾಲ ಉಡುಪಿ ಜಿಲ್ಲೆ ಇವರು 2025-26ನೇ ಸಾಲಿನ ಪ್ರೌಢಶಾಲಾ ಶಿಕ್ಷಕರಿಗೆ ಉಡುಪಿಯ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಹೆಬ್ರಿ ಪಿ…

ತೆಳ್ಳಾರು ಶ್ರೀ ಬಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆಗೆ ಕರುನಾಡ ಸಿರಿ ಪ್ರಶಸ್ತಿ

ಕಾರ್ಕಳ,ಡಿ.19: ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಇವರ ಪ್ರಾಯೋಜಕತ್ವದಲ್ಲಿ ಕಾರ್ಕಳ ತಾಲೂಕಿನ ಉತ್ತಮ ಕನ್ನಡ ಮಾಧ್ಯಮ ಶಾಲೆಗೆ ಕೊಡಮಾಡುವ “ಕರುನಾಡ ಸಿರಿ -2025 ಪ್ರಶಸ್ತಿಗೆ ಶ್ರೀ ಬಿ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ…

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಷನ್ ಚಿಕಿತ್ಸೆ : ಮೆದುಳಿಗೆ ಪೇಸ್‌ಮೇಕರ್ ಅಳವಡಿಕೆ

ಮಣಿಪಾಲ,ಡಿ.19: ಚಲನೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ, ಒಂದು ಕಪ್ ಚಹಾ ಹಿಡಿಯುವುದು, ಶರ್ಟ್ ಬಟನ್ ಹಾಕುವುದು ಅಥವಾ ಸರಳವಾಗಿ ನಡೆಯುವುದು ಮುಂತಾದ ಸರಳ ಚಟುವಟಿಕೆಗಳು ದೈನಂದಿನ ಹೋರಾಟವಾಗುತ್ತವೆ. ಆರಂಭಿಕ ಹಂತಗಳಲ್ಲಿ ಔಷಧಿಗಳು ಪರಿಹಾರವನ್ನು ನೀಡಬಹುದಾದರೂ, ಅವುಗಳ ಪರಿಣಾಮಕಾರಿತ್ವವು ಕಾಲಾನಂತರದಲ್ಲಿ ಮಸುಕಾಗುತ್ತದೆ.…

ಗೃಹಲಕ್ಷ್ಮೀ ಯೋಜನೆಗೆ ಸಚಿವೆ ಲಕ್ಷ್ಮೀಯೇ ಕಂಟಕ : ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

ಕಾರ್ಕಳ, ಡಿ.18: ಕಳೆದ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ಮಹಿಳಾ ಮತದಾರರನ್ನು ಮರಳು ಮಾಡಿ ಮತ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಜಾರಿಗೊಳಿಸಿದ ಮಹಿಳೆಯರ ಪರವಾದ ಗ್ಯಾರಂಟಿ ಯೋಜನೆಗಳು ಗಂಡಸರ ಜೇಬಿಗೆ ಕೈ ಹಾಕಿ ಹೆಂಗಸರಿಗೆ ನೀಡಿದ ಕುತಂತ್ರ ಈಗ ಜಗಜಾಹೀರಾಗಿದೆ.…

ಹೆಬ್ರಿ: ಫಾಲ್ಸ್ ನಲ್ಲಿ ಬಂಡೆಯಿಂದ ಬಿದ್ದು ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಹೆಬ್ರಿ, ಡಿ.18: ಮೂರ್ಚೆರೋಗ ಇದ್ದ ಯುವಕನೋರ್ವ ಫಾಲ್ಸ್ ನಲ್ಲಿ ಬಂಡೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ 2 ದಿನಗಳ ಬಳಿಕ ಮೃತಪಟ್ಟಿದ್ದಾರೆ. ಉಡುಪಿ ಕೊಂಜಾಡಿ ಮೂಲದ ಮನ್ವೀತ್ (25) ತನ್ನ ಪೋಷಕರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಡಿ. 12ರಂದು ಕೊಂಜಾಡಿಗೆ…

ಡಿ. 26- 28 ಮಾಳ ಗುರುಕುಲ ವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

ಕಾರ್ಕಳ, ಡಿ.18: ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವು ಡಿ. 26ರಿಂದ 28 ರವರೆಗೆ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ. ಎಂ ಪ್ರಭಾಕರ್ ಜೋಶಿ ಹೇಳಿದರು‌. ಅವರು ಬುಧವಾರ ಕಾರ್ಕಳ…

ನಾಳೆ(ಡಿ.19) ಕಾರ್ಕಳ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ

ಕಾರ್ಕಳ, ಡಿ.18: ನಾಳೆ (ಡಿ.19) 33ಕೆವಿ ಲೈನ್ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು, ಮಿಯ್ಯಾರ್ ಫೀಡರ್ ಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದ್ದರಿಂದ…

ಡಿ.22 ರಂದು ಬಜಗೋಳಿಯಲ್ಲಿ ಅಡಿಕೆ ಬೆಳೆ ಎಲೆಚುಕ್ಕೆ ರೋಗ ಹಾಗೂ ಸಮಗ್ರ ನಿರ್ವಹಣೆ ವಿಚಾರ ಸಂಕಿರಣ

ಕಾರ್ಕಳ,ಡಿ.18: ತೋಟಗಾರಿಕೆ ಇಲಾಖೆ ಕಾರ್ಕಳ, ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ ಬಜಗೋಳಿ ಸಹಯೋಗದಲ್ಲಿ ಅಡಿಕೆ ಬೆಳೆ ಎಲೆ ಚುಕ್ಕೆ ರೋಗ ಹಾಗೂ ಅಡಿಕೆ ಬೆಳೆ ಸಮಗ್ರ ನಿರ್ವಹಣೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು…

ಕಾದಂಬರಿಗಳಲ್ಲಿಮಹಿಳಾ ನಾಯಕಿಯರ ಮಾನಸಿಕ ವಿಶ್ಲೇಷಣೆ ಕುರಿತ ಪ್ರಬಂಧಕ್ಕೆ ಸುಧೀಕ್ಷಾ ಪೈ ಅವರಿಗೆ ಪಿಎಚ್.ಡಿ. ಪದವಿ

ಕಾರ್ಕಳ, ಡಿ.17: ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಶ್ರೀಮತಿ ಸುಧೀಕ್ಷಾ ಪೈ ಅವರು “A Psychoanalytical Study of Women Protagonists in Select Novels of Preeti Shenoy” ಎಂಬ ಶೀರ್ಷಿಕೆಯ ಪ್ರಬಂಧವನ್ನು ಯಶಸ್ವಿಯಾಗಿ ನಿರ್ವಹಿಸಿ Ph.D. ಪದವಿಯನ್ನು ಪಡೆದಿದ್ದಾರೆ. ಶ್ರೀಯುತ ಲೂರ್ದುಸ್ವಾಮಿ…

ಪ್ರಬಂಧ ಸ್ಪರ್ಧೆ :ಜ್ಞಾನಸುಧಾದ ಪ್ರಜ್ಞಾ ಮೋಹನ್‌ಗೆ ತೃತೀಯ ಸ್ಥಾನ

ಕಾರ್ಕಳ,ಡಿ,17: ತುಮಕೂರಿನ ಎಂಪ್ರೈಸ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಡೆದ ಪದವಿಪೂರ್ವ ಕಾಲೇಜಿನ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ-2025ರ ಕನ್ನಡಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ…