Category: ಸ್ಥಳೀಯ ಸುದ್ದಿಗಳು

ಬೋಳ: ಬೀಗ ಹಾಕಿದ್ದ ಮನೆಗೆ ನುಗ್ಗಿ ಕಳವು

ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ಎಂಬಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು ರೂ.12,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ. ಸೆಲಿನ್ ಡಿಸೋಜ ಅವರ ಅನಾರೋಗ್ಯದ ಹಿನ್ನಲೆ ನ.30 ರಂದು ಅವರ ಮಗಳು ಮನೆಗೆ ಬೀಗ…

ಮುನಿಯಾಲು: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಹೆಬ್ರಿ,ಡಿ.08: ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುನಿಯಾಲು ಮುಟ್ಲುಪಾಡಿ ನಿವಾಸಿ ಕಾಳು ನಾಯ್ಕ್ (79ವ) ಎಂಬವರು ನಿನ್ನೆ (ಭಾನುವಾರ) ಶವವಾಗಿ ಪತ್ತೆಯಾಗಿದ್ದಾರೆ. ಅವರು ಈ ಹಿಂದೆಯೂ ಹಲವು ಬಾರಿ ಮನೆಯಿಂದ ಹೋದವರು 2-3 ದಿನ ಬಿಟ್ಟು ಮನೆಗೆ ವಾಪಾಸ್ಸಾಗುತ್ತಿದ್ದರು. ಆದರೆ…

ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಿದ್ದಾಪುರ ವಾಸುದೇವ ಭಟ್

ಕಾರ್ಕಳ,ಡಿ.06: ತಾಲೂಕು ಇಪ್ಪತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಿದ್ಧಾಪುರ ವಾಸುದೇವ ಭಟ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ತಿಳಿಸಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಸಿದ್ದಾಪುರದ ಲಕ್ಷ್ಮಣ ಭಟ್ ಮತ್ತು ರಾಧಾಬಾಯಿ ದಂಪತಿ ಪುತ್ರರಾಗಿ…

ಡಿ.13 ರಂದು ಕುಕ್ಕುಂದೂರು KMES ಶಿಕ್ಷಣ ಸಂಸ್ಥೆಯ 42ನೇ ವಾರ್ಷಿಕೋತ್ಸವ

ಕಾರ್ಕಳ, ಡಿ.06:ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕಾರ್ಕಳದ ಕುಕ್ಕುಂದೂರು KMES ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವವು ಡಿ.13 ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಎಸ್ ಇಮ್ತಿಯಾಜ್ ಅಹಮದ್ ತಿಳಿಸಿದರು. ಅವರು ಶನಿವಾರ ಈ ಕುರಿತು ಮಾತನಾಡಿ, ದಶಕಗಳ ಹಿಂದೆ ಕ್ರಾಂತಿಕಾರಕ ಬದಲಾವಣೆ…

ಡಿ.9 ರಂದು ಅಜೆಕಾರು,ಕಾಡುಹೊಳೆ, ಮುನಿಯಾಲು ಬಜಗೋಳಿ ಪರಿಸರದಲ್ಲಿ ಕರೆಂಟಿಲ್ಲ

ಕಾರ್ಕಳ, ಡಿ.06: 33ಕೆವಿ ಸ್ಟೇಷನ್ ಮಾರ್ಗದ ಲೈನ್ ಕಾಮಗಾರಿ ಹಾಗೂ ಹಿರಿಯಡ್ಕದಿಂದ ಅಜೆಕಾರು ಹೋಗುವ 33 ಕೆವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ,ಡಿ.9 ಮಂಗಳವಾರ 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಬಜಗೋಳಿ, ಹೊಸ್ಮಾರು ಫೀಡರ್ ಗಳಲ್ಲಿ,…

ಡಿ.7 ರಂದು ಕಾರ್ಕಳ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

ಕಾರ್ಕಳ: 220/110/11 ಕೆವಿ ಕೇಮಾರು ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಫೀಡರ್ ನಲ್ಲಿ, ಮತ್ತು 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಟೌನ್ ಫೀಡರ್‌ನಲ್ಲಿ, ವ್ಯವಸ್ಥಾ ಸುಧಾರಣಾ (ಸ್ಪೇನ್ ಪೋಲ್) ಕಾಮಗಾರಿಯನ್ನು ತುರ್ತಾಗಿ ಹಮ್ಮಿಕೊಂಡಿರುವುದರಿಂದ ಡಿ.07 ಭಾನುವಾರ…

ವಿಶ್ವ ವಿಕಲಚೇತನರ ದಿನಾಚರಣೆ 2025: ಫುಟ್ಬಾಲ್ ನಲ್ಲಿ ಸಾಧನೆಗೈದ ವಿಶೇಷ ವಿದ್ಯಾರ್ಥಿನಿ ಪ್ರೀತಿ ಅವರಿಗೆ ಸನ್ಮಾನ

ಉಡುಪಿ,ಡಿ.05: ರಾಷ್ಟಮಟ್ಟದ ಫುಟ್ ಬಾಲ್ ನಲ್ಲಿ ಸಾಧನೆಗೈದ ವಿಜೇತ ವಿಶೇಷ ವಿದ್ಯಾರ್ಥಿನಿ ಪ್ರೀತಿ ಅವರನ್ನು ಉಡುಪಿ ಪುರ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್,…

ಈದು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಕಾರ್ಕಳ: ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಈದು ಕಂಠಾವು ನಿವಾಸಿ ಗಂಗಯ್ಯ ದೇವಾಡಿಗ ಮೃತಪಟ್ಟವರು. ಗಂಗಯ್ಯ ಅವರು ಆರು ತಿಂಗಳ ಹಿಂದೆ ಹೊಟ್ಟೆನೋವು ಮತ್ತು ಮಲವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ…

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಆವಿರ್ಭವ – ಸಿಂದೂರ ಸಂಭ್ರಮ ” ವಾರ್ಷಿಕೋತ್ಸವ ಸಮಾರಂಭ – ಡಿಸೆಂಬರ್ 4ರಿಂದ 6ರವರೆಗೆ ಸಾಂಸ್ಕೃತಿಕ ವೈಭವ

ಕಾರ್ಕಳ, ಡಿ.04: ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನು ಶ್ರೀಮಂತಗೊಳಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮಹೋತ್ಸವ “ಕ್ರಿಯೇಟಿವ್ ಆವಿರ್ಭವ–2025” ಡಿಸೆಂಬರ್ 4, 5 ಮತ್ತು 6, 2025 ರಂದು ವೈಭವದೊಂದಿಗೆ ನಡೆಯಲಿದೆ. ಈ ಮೂರು ದಿನಗಳ ಸಂಭ್ರಮವು ಕ್ರಿಯೇಟಿವ್ ಶಿಕ್ಷಣ…

ಕಾರ್ಕಳ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಕಳವು

ಕಾರ್ಕಳ, ಡಿ.04: ತಾಲೂಕಿನ ಕಸಬಾ ಗ್ರಾಮದ ಆನೆಕೆರೆ ಬಸದಿ ಬಳಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಸ್ಕೂಟರನ್ನು ಕಳ್ಳರು ಕಳವುಗೈದಿರುವ ಘಟನೆ ಡಿ.1 ರಂದು ನಡೆದಿದೆ. ಜಾರ್ಕಳ ಮುಂಡ್ಲಿಯ ಗುಣಕರ ಶೆಟ್ಟಿ ಎಂಬವರು ಡಿ.1 ರಂದು ಬೆಳಿಗ್ಗೆ 8.20 ರ ವೇಳೆಗೆ…