Category: ಸ್ಥಳೀಯ ಸುದ್ದಿಗಳು

ಕಾರ್ಕಳ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕೀಯ: ಬೋಳ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ

ಕಾರ್ಕಳ: ರಾಜ್ಯ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಬೋಳ ಗ್ರಾಮದಲ್ಲಿ ಅನುಷ್ಟಾನಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಗ್ರಾಮ ಸಭೆಯಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ದ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ…

ಹೆಬ್ರಿ ಸಂತೆಕಟ್ಟೆ ಹೊಟೇಲ್’ನಲ್ಲಿ ಹೊಡೆದಾಟ,ಜಾತಿ ನಿಂದನೆ ಪ್ರಕರಣ: ನಾಲ್ವರು ಆರೋಪಿಗಳ‌ ಬಂಧನ

ಹೆಬ್ರಿ, ಜು.23: ಹೆಬ್ರಿಯ ಕಳ್ತೂರು ಸಂತೆಕಟ್ಟೆಯ ಸಿರಿ ಮುಡಿ ಹೊಟೇಲಿನಲ್ಲಿ ಜು.20ರಂದು ನಡೆದ ವ್ಯಕ್ತಿಯೊಬ್ಬನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿ ಶೀಟರ್ ಸೇರಿದಂತೆ ಒಟ್ಟು ನಾಲ್ಕು ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್‌ಗಳಾದ ಶ್ರೀಕಾಂತ್ ಕುಲಾಲ್…

ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರು ಭಾಷೆ.ಪಂಗಡ,ಧರ್ಮಾತೀತವಾಗಿ, ರಾಜಕೀಯ ಪಕ್ಷಗಳ ಸಿದ್ದಾಂತಗಳಿಗೆ ಅಂಟದೇ ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಅಶ್ವಥ್ ಎಸ್.ಎಲ್

ಕಾರ್ಕಳ:ಸಮಾಜ ಹಾಗೂ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಹೊಣೆಗಾರಿಕೆ ಮಾಧ್ಯಮದ ಮೇಲಿದೆ. ಪತ್ರಕರ್ತರು ಭಾಷೆ.ಪಂಗಡ,ಧರ್ಮಾತೀತವಾಗಿ, ರಾಜಕೀಯ ಪಕ್ಷಗಳ ಸಿದ್ದಾಂತಗಳಿಗೆ ಅಂಟದೇ ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಅಶ್ವಥ್ ಎಸ್.ಎಲ್ ಹೇಳಿದರು. ಅವರು ಕಾರ್ಕಳ ತಾಲೂಕು ಪತ್ರಕರ್ತರ ಸಂಘ…

ಕಾರ್ಕಳ: ಮರದ ತುಂಡು ಮೈಮೇಲೆ ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಮರದ ತುಂಡು ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಾರ್ಕಳದ ಕೆದಿಂಜೆಯಲ್ಲಿ ನಡೆದಿದೆ. ಕೆದಿಂಜೆಯ ಗಣೇಶ್ ಅವರು ವಾಸು ಎಂಬವರ ಬಳಿ ಟಿಂಬರ್ ಕೆಲಸ ಮಾಡುತ್ತಿದ್ದು, ಜುಲೈ 19 ರಂದು ಕೌಡೂರಿನಲ್ಲಿ ಕೆಲಸ ಮಾಡುತ್ತಿದ್ದ…

ನೀರೆ: ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಕಳೆದ 30 ವರ್ಷಗಳ ಹಿಂದೆ ಮನೆಯನ್ನು ತೊರೆದು ಕಾರ್ಕಳ ತಾಲೂಕಿನ ನೀರೆ ಪರಿಸರದಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದ ವ್ಯಕ್ತಿ ಅಸೌಖ್ಯದಿಂದ ಮೃತಪಟ್ಟಿದ್ದಾರೆ. ಹೆಬ್ರಿ ಗ್ರಾಮದ ಮುದ್ರಾಡಿಯ ಕೃಷ್ಣ (56ವ) ಎಂಬವರು 30 ವರ್ಷಗಳ ಹಿಂದೆ ತಮ್ಮ ಮನೆಯನ್ನು ಬಿಟ್ಟು ನೀರೆಯಲ್ಲಿ ಭಿಕ್ಷಾಟನೆ…

ಕಾಂತಾವರ ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ: ಗುಂಡಿಮಜಲು ಮತ್ತು ಜೋಗಿದ್ವಯರಿಗೆ ಯಕ್ಷದೇಗುಲ ಪ್ರಶಸ್ತಿ

ಕಾರ್ಕಳ : ಕಾಂತಾವರ ಯಕ್ಷದೇಗುಲ ಸಂಸ್ಥೆಯ ವಾರ್ಷಿಕ ಯಕ್ಷೋಲ್ಲಾಸ ಕಾರ್ಯಕ್ರಮವು ಭಾನುವಾರ ಶ್ರೀ ಕ್ಷೇತ್ರ ಕಾಂತಾವರದಲ್ಲಿ ಜರಗಿತು. ನಿರಂತರ ಹನ್ನೆರಡು ತಾಸಿನ ಯಕ್ಷೋಲ್ಲಾಸ ಸಮಾರಂಭವನ್ನು ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿವರ ಉಪಸ್ಥಿತಿಯಲ್ಲಿ ಬಾರಾಡಿ ಬೀಡು ಸಂಜಯ್ ಬಲ್ಲಾಳ್ ರವರು ಉದ್ಘಾಟಿಸಿದರು. ಮುಖ್ಯ…

ಬೋಳದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸಿದ ಬಿಜೆಪಿ ಗ್ರಾ. ಪಂ ಸದಸ್ಯರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಕಾರ್ಕಳ ,ಜು.21: ಕಾರ್ಕಳ ತಾಲೂಕು ಬೋಳ ಗ್ರಾಮದ ಗ್ರಾಮ ಪಂಚಾಯತ್ ಸಭೆಯಲ್ಲಿ ರಾಜ್ಯ ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ ಬಿಜೆಪಿ ಪಂಚಾಯತ್ ಸದಸ್ಯರ ದುರ್ನಡತೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಬೋಳ…

ಕಾರ್ಕಳ: ಕಾಬೆಟ್ಟು 40ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ಕಾರ್ಕಳ ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 40ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಮಿತಿಯ ಅಧ್ಯಕ್ಷರಾದ ನವೀನ್ ದೇವಾಡಿಗ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ, ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ…

ಹೆಬ್ರಿ: ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣ: ಪ್ರತಿದೂರು ದಾಖಲು

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆ ಹೊಟೇಲೊಂದರಲ್ಲಿ ಗಲಾಟೆ ತಡೆಯಲು ಹೋದ ವೇಳೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿದೂರು ದಾಖಲಾಗಿದ್ದು, ಸದಾನಂದ ,ಶ್ರೀಕಾಂತ್, ಸಂತೋಷ್ ಎಂಬವರು ತನಗೆ ಮಾರಣಾಂತಿಕ ಹಲ್ಲೆ ನಡೆಸಿ ತಲವಾರಿನಿಂದ ಕಡಿದು…

ಕಾರ್ಕಳ: ಟಾಸ್ಕ್ ಗೆ ಹಣ ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿ 15 ಲಕ್ಷಕ್ಕೂ ಅಧಿಕ ವಂಚನೆ

ಕಾರ್ಕಳ: ಮಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಮೂಲಕ ಲಿಂಕ್ ಕಳುಹಿಸಿ ಟಾಸ್ಕ್ ಗೆ ಜಾಯಿನ್ ಆಗುವಂತೆ ತಿಳಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಕಮಿಷನ್ ನೀಡುವುದಾಗಿ 15 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣ ನಡೆದಿದೆ. ಸಸಿಹಿತ್ಲು ನಿವಾಸಿ ಅಶ್ವಿತ್ ಅವರ…