Category: ಸ್ಥಳೀಯ ಸುದ್ದಿಗಳು

ಕಾರ್ಕಳ: ಬೀಗ ಹಾಕಿದ್ದ ಮನೆಗೆ ನುಗ್ಗಿದ ಕಳ್ಳರು-ನಗದು ಸಹಿತ 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ಕಾರ್ಕಳ: ಮನೆಗೆ ಬೀಗ ಹಾಕಿ ಮನೆಯ ಮಾಲೀಕ ಪ್ರವಾಸಕ್ಕೆ ಹೋಗಿದ್ದ ಹೋಗಿದ್ದ ವೇಳೆ ಕನ್ನ ಹಾಕಿದ ಖದೀಮರು ಮನೆಯಲ್ಲಿದ್ದ ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆಯ ಸಾತುರ್ನಿನ್‌ ಮತಾಯಸ್‌ ಎಂಬವರು…

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ಕಾರ್ಕಳ: ಗಾಂಧಿ ಪ್ರತಿಪಾದಿಸಿದ ತತ್ವ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಮತ್ತು ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ದೇಶದ ಚುಕ್ಕಾಣಿ ಹಿಡಿದವರು ಮನಗಾಣಬೇಕು. ಆ ಮೂಲಕ…

ಅಜೆಕಾರು:ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್- ಮಹಿಳೆ ವಿರುದ್ದ ಪ್ರಕರಣ ದಾಖಲು

ಅಜೆಕಾರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿಸುವ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಮಹಿಳೆಯೊಬ್ಬರ ವಿರುದ್ದ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಪಾದಿತೆ ವಿಜಯ ವಿಜಿ ಎಂಬವರು ಸೆ. 30 ರಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆಯಲ್ಲಿ “”ಉಪ್ಪು ತಿಂದ…

ನಂದಳಿಕೆ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ತಾಲೂಕಿನ ನಂದಳಿಕೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಂದಳಿಕೆ ನಿವಾಸಿ ಸಂತೋಷ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಂತೋಷ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಸೆ. 30 ಮನೆಯಲ್ಲಿ ನವರಾತ್ರಿ ಪೂಜೆ ನಡೆಸಿದ್ದರು.…

ಎಳ್ಳಾರೆ ಪಾಲ್ಬೆಟ್ಟು ಮಹಮ್ಮಾಯಿ ದೇವಸ್ಥಾನದಲ್ಲಿ ಅಜೆಕಾರು ಠಾಣಾಧಿಕಾರಿ ಮಹೇಶ್ ಟಿ.ಎಮ್ ಅವರಿಗೆ ಸನ್ಮಾನ

ಕಾರ್ಕಳ, ಅ.01: ಎಳ್ಳಾರೆ ಗ್ರಾಮದ ಪಾಲ್ಬೆಟ್ಟು ಮಹಮ್ಮಾಯಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಎಸ್ಐ ಮಹೇಶ್ ಟಿ.ಎಮ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಳ್ಳಾರೆ ಗ್ರಾಮದ ಮುಳ್ಕಾಡು ನಿವಾಸಿ ಕುಮುದಾ ಶೆಟ್ಟಿಯವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು…

ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳಿಂದ ಕ್ರಿಸ್ತ ಸೇವಕೀ ಆಶ್ರಮ ಸಂದರ್ಶನ

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿದ್ಯಾರ್ಥಿಗಳು ನಿಟ್ಟೆಯ ಪರ್ಪಲೆಯಲ್ಲಿರುವ ಕ್ರಿಸ್ತ ಸೇವಕೀ ಆಶ್ರಮವನ್ನು ಸಂದರ್ಶಿಸಿದರು. ಆಶ್ರಮ ನಿವಾಸಿಗಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ದಿನಸಿ ಸಾಮಾಗ್ರಿಗಳನ್ನು ಹಂಚಿದರು. ಈ ಸಂದರ್ಭದಲ್ಲಿ ಸಂಸ್ಥೆಯ…

ಕಾರ್ಕಳ: ರೆಂಜಾಳದ ವ್ಯಕ್ತಿ ನಾಪತ್ತೆ

ಕಾರ್ಕಳ:ತಾಲೂಕಿನ ರೆಂಜಾಳ ಗ್ರಾಮದ ಪಾಜಲು ದರ್ಖಾಸು ನಿವಾಸಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ರೆಂಜಾಳದ ಜಗದೀಶ ಶೆಟ್ಟಿ (33 ವರ್ಷ) ನಾಪತ್ತೆಯಾದವರು. ಅವರು ಕಳೆದ 5-6 ವರ್ಷಗಳಿಂದ ವಿಪರೀತ ಕುಡಿತದ ಚಟ ಹೊಂದಿದ್ದು, ಚಿಕಿತ್ಸೆ ಮಾಡಿಸಿದರೂ ಕುಡಿತ ಮುಂದುವರೆಸಿದ್ದರು. ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು…

ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಅವೈಜ್ಞಾನಿಕ ಜನಗಣತಿಗೆ ಕಾರ್ಕಳ ಬಿಜೆಪಿ ಖಂಡನೆ

ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಜನಗಣತಿ ಸಂಪೂರ್ಣವಾಗಿ ರಾಜಕೀಯ ಉದ್ದೇಶಗಳನ್ನು ಪೂರೈಸುವ ಸಲುವಾಗಿ ಸರ್ಕಾರದ ಮೂಲಕ ನಡೆಸಲ್ಪಡುತ್ತಿದೆ. ಅಲ್ಲದೇ ಈ ಜನಗಣತಿ ವೈಜ್ಞಾನಿಕವಾಗಿಲ್ಲ, ಸಮಾಜದ ಹಿತಾಸಕ್ತಿಯ ದೃಷ್ಟಿಯಿಂದಲೂ ಇದು ಸರಿಯಿಲ್ಲ. ಆದ್ದರಿಂದ ಈ ಜಾತಿ ಜನಗಣತಿಯನ್ನು ಕಾರ್ಕಳ ಬಿಜೆಪಿ ತೀವೃವಾಗಿ…

ಕಾರ್ಕಳ ಜ್ಞಾನಸುಧಾದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಉಡುಪಿಯ ವಿ-ರೀಚ್ ಅಕಾಡೆಮಿಯ ಮುಖ್ಯಸ್ಥ ಸಿ.ಎಸ್ ಸಂತೋಷ್ ಪ್ರಭು ಇವರಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಜರುಗಿತು. ಪ್ರಸ್ತುತ ವಾಣಿಜ್ಯ ಕ್ಷೇತ್ರದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ತಿಳಿಸುತ್ತ…

ಹೆಬ್ರಿ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ

ಹೆಬ್ರಿ : ಇಲ್ಲಿನ ಬೈಲುಮನೆ ಶ್ರೀ ರಾಘವೇಂದ್ರ ಮಠದ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಮಹಾ ಚಂಡಿಕಾಯಾಗವು ಪ್ರಧಾನ ಅರ್ಚಕ ವೇದಮೂರ್ತಿ ಎಚ್ ಗೋಪಾಲ ಆಚಾರ್ಯ ಇವರ ನೇತೃತ್ವದಲ್ಲಿ ಸೆ.30 ರಂದು ನಡೆಯಿತು. ದೇವಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಹಾಪೂಜೆ, ಬ್ರಾಹ್ಮಣ…