Category: ಗ್ರಾಮೀಣ ಸುದ್ದಿ

ಕಾವೂರು : ಗಾಳಿ ಮಳೆಗೆ ಮನೆಗೆ ಮರ ಬಿದ್ದು, ಗಾಯ-ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ

ಮೂಡುಬಿದಿರೆ : ವಿಪರೀತ ಗಾಳಿ ಮಳೆಯಿಂದಾಗಿ ಕಾವೂರು ಬಿಜಿಎಸ್ ಪ್ರೌಢಶಾಲೆ ಬಳಿ ಮನೆಗೆ ಬೃಹತ್ ಮರ ಉರುಳಿಬಿದ್ದು ಮನೆಸಂಪೂರ್ಣ ಹಾನಿಗೀಡಾಗಿದ್ದು, ಮನೆಯ ಸದಸ್ಯರು ಗಾಯಗೊಂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯಲ್ಲಿ ಗಾಯಗೊಂಡ ಸಂತ್ರಸ್ತ…

ಕಡ್ತಲ: ಉಚಿತ ಪುಸ್ತಕ ವಿತರಣೆ

ಅಜೆಕಾರು: ಕಡ್ತಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿ ವಿಶ್ವನಾಥ ಪೂಜಾರಿ ಕಡ್ತಲ ಇವರು ಕೊಡಮಾಡಿದ ಉಚಿತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಮಾಲತಿ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ. ಉದ್ಯಮಿ ತಾರಾನಾಥ…

ಎಳ್ಳಾರೆ : ಕನ್ನಡಕ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ- ಸಧೃಡ ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಅತ್ಯಗತ್ಯ: ದಯಾನಂದ ಹೆಗ್ಡೆ

ಕಾರ್ಕಳ: ಭಾರತ ಸಾಂಸ್ಕೃತಿಕ ಹಿನ್ನಲೆ ಇರುವ ದೇಶ,ಯುವಕರು ಒಂದಾದರೆ ಸಧೃಡ ರಾಷ್ಟ್ರವನ್ನು ಕಟ್ಟಬಹುದು. ಈ ನಿಟ್ಟಿನಲ್ಲಿ ಯುವಕರು ಒಂದಾಗುವುದು ಅಗತ್ಯವಿದೆ ಎಂದು ಕ್ಯಾಂಪ್ಕೋ ನಿರ್ದೇಶಕರಾದ ದಯಾನಂದ ಹೆಗ್ಡೆ ಹೇಳಿದರು. ಅವರು ಎಳ್ಳಾರೆಯಲ್ಲಿ ನಡೆದ ಕನ್ನಡಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ…

ಹಿರ್ಗಾನ :ಬಿ.ಎಂ ಅನುದಾನಿತ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ

ಕಾರ್ಕಳ: ಕಾರ್ಕಳ ತಾಲೂಕು ಹಿರ್ಗಾನ ಬಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಉಚಿತ ಪಠ್ಯಪುಸ್ತಕಗಳ ವಿತರಣೆ ಹಾಗೂ ದಾನಿಗಳಾದ ಸಿರಿಯಣ್ಣ ಶೆಟ್ಟಿ, ಅಶೋಕ್ ನಾಯಕ್ ಹಾಗೂ ಚೇತನ್ ಶೆಟ್ಟಿಯವರು ಕೊಡಮಾಡಿದ ನೋಟ್ ಪುಸ್ತಕಗಳ ಉಚಿತ ವಿತರಣಾ ಕಾರ್ಯಕ್ರಮವು…

ದೊಂಡೇರಂಗಡಿ : ಬೀಳ್ಕೊಡುಗೆ ಸಮಾರಂಭ

ಅಜೆಕಾರು : ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 38 ವರ್ಷಗಳ ಕಾಲ ಗ್ರೂಪ್-ಡಿ ನೌಕರರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ಪಾರ್ವತಿ. ಕೆ. ಅವರಿಗೆ ಬೀಳ್ಳೊಡುಗೆ ಸಮಾರಂಭ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ ಅಧ್ಯಕ್ಷತೆ…

ಹೆಬ್ರಿಯ ತಿಂಗಳೆಯಲ್ಲೂ ಇದೆ ದೆಹಲಿಯ ಸಂಸತ್ ಭವನದ ಸೆಂಗೋಲ್ ಪರಂಪರೆ!

ಕಾರ್ಕಳ: ದೆಹಲಿಯ ನೂತನ ಸಂಸತ್ ಭವನದಲ್ಲಿ ಅಧಿಕಾರದ ಹೆಗ್ಗುರುತಾದ(ಸೆಂಗೋಲ್) ರಾಜದಂಡ ಪ್ರತಿಷ್ಠಾಪನೆಯಂತೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ತಿಂಗಳೆ ಎಂಬ ಪುಟ್ಟ ಊರಿನಲ್ಲಿಯೂ ಸೆಂಗೋಲ್(ರಾಜದAಡ) ಹಸ್ತಾಂತರದ ಸಂಪ್ರದಾಯ ಹಿಂದಿನಿAದಲೂ ಬೆಳೆದುಬಂದಿದೆ. ತಿಂಗಳೆ ಗರಡಿ ನೇಮೋತ್ಸವದಲ್ಲಿ ಇಂತಹ ಪರಂಪರೆ ನಡೆಯುತ್ತಾ ಬಂದಿದೆ ಎನ್ನುವುದೇ…

ಮಾಳ: ಮೇ 30ರಂದು(ನಾಳೆ) ರಕ್ತದಾನ ಶಿಬಿರ

ಕಾರ್ಕಳ:ಯು.ಎಫ್.ಸಿ ಫ್ರೆಂಡ್ಸ್ ಕ್ಲಬ್ ಹುಕ್ರಟ್ಟೆ ಮಾಳ ಇದರ ವತಿಯಿಂದ ದಿ.ರೋಹಿತ್ ಡಿಮೆಲ್ಲೋ ಸ್ಮರಣಾರ್ಥ ಹುಕ್ರಟ್ಟೆ ಕೇರ ಚರ್ಚಿನಲ್ಲಿ ರಕ್ತದಾನ ಶಿಬಿರವು ಮಂಗಳವಾರ ಬೆಳಗ್ಗೆ 9.30ರಿಂದ 1 ಗಂಟೆಯ ವರೆಗೆ ನಡೆಯಲಿದೆ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು…

ಕಾರ್ಕಳ: ಉಚ್ಚಂಗಿ ಮಾರಿಯಮ್ಮ ದೇವಿಯ ಮಾರಿಪೂಜೆ ಉತ್ಸವ

ಕಾರ್ಕಳ: ಕಾರ್ಕಳ ಉಚ್ಚಂಗಿ ಮಾರಿಯಮ್ಮನ ವಾರ್ಷಿಕ ಮಾರಿಪೂಜೆ ಸಂಭ್ರಮ ಸಡಗರದಿಂದ ಜರುಗಿತು. ಮಂಗಳವಾರ ಬೆಳಗ್ಗೆ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆ ಮೂಲಕ ದೇವಿಯ ವಿಗ್ರಹವನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಮಾರ್ಕೆಟ್ ಬಳಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು. ಮುಂಜಾನೆಯಿAದಲೇ ನೂರಾರು ಭಕ್ತಾಧಿಗಳು ದೇವಿಗೆ ಹಣ್ಣುಕಾಯಿ,ಹರಕೆಯ ಹೂವಿನಪೂಜೆ ಸಮರ್ಪಿಸಿ,…

ಕಡ್ತಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಅಜೆಕಾರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದು ಗ್ರಾಮೀಣ ಕಾಂಗ್ರೆಸ್ ಸಮಿತಿ ಕಡ್ತಲ, ಕುಕ್ಕುಜೆ,ಎಳ್ಳಾರೆ ವತಿಯಿಂದ ಕಡ್ತಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ…

ಕಾರ್ಕಳ: ಮೀನು ಹಿಡಿಯಲು ದುಷ್ಕರ್ಮಿಗಳಿಂದ ಹೊಳೆಯ ನೀರಿಗೆ ವಿಷಪ್ರಾಷನ: ನೂರಾರು ಜಲಚರಗಳ ಮಾರಣಹೋಮ:ಸ್ಥಳೀಯರ ತೀವ್ರ ಆಕ್ರೋಶ

ಕಾರ್ಕಳ: ಮೀನು ಹಿಡಿಯಲು ಕೆಲ ದುಷ್ಕರ್ಮಿಗಳು ಹೊಳೆಯ ನೀರಿಗೆ ವಿಷಪ್ರಾಶನ ಮಾಡಿರುವ ಪರಿಣಾಮ ಮೀನುಗಳು ಸೇರಿದಂತೆ ಅಸಂಖ್ಯಾತ ಜಲಚರಗಳ ಮಾರಣಹೋಮವಾಗಿದೆ. ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಮಲೆಬೆಟ್ಟು ಎಂಬಲ್ಲಿನ ಸ್ವರ್ಣಾ ನದಿಯ ಬಾಂಕ‌ ಗುಂಡಿ ಎಂಬಲ್ಲಿ ಭಾನುವಾರ ದುಷ್ಕರ್ಮಿಗಳು ಗೇರುಬೀಜ ಎಣ್ಣೆ…