Category: Un

ಕಾರ್ಕಳ : ಪರಶುರಾಮ ಥೀಂ ಪಾರ್ಕ್ ಗೆ ಭೇಟಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಕಾರ್ಕಳ: ಕಾರ್ಕಳ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಪರಶುರಾಮ ಥೀಂ ಪಾರ್ಕ್ ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭೇಟಿ ನೀಡಿ ಪಾರ್ಕ್ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯವೇ ಗುರುತಿಸುವಂತೆ ಸಚಿವ ಸುನಿಲ್ ಕುಮಾರ್…

ಕಾರ್ಕಳ : ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ  : ಅಂಗನವಾಡಿ ಮಕ್ಕಳಿಗೆ ಪರಶುರಾಮ ಛದ್ಮವೇಷ ಸ್ಪರ್ಧೆ

ಕಾರ್ಕಳ: ತುಳುನಾಡ ಸೃಷ್ಟಿಕರ್ತ ಪರಶುರಾಮನ ಕಂಚಿನ ಪುತ್ಥಳಿ ಹಾಗೂ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಯು ಜ.27 ರಂದು ನಡೆಯಲಿದ್ದು, ಈ ನಿಟ್ಟಿನಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪರಶುರಾಮ ಛದ್ಮವೇಷ ಸ್ಪರ್ಧೆಯನ್ನು ಇಂದು ಏಕಕಾಲದಲ್ಲಿ…

ದೇವರಿಗೆ ಮಹಿಮೆ ನೀಡುವ ಬದುಕು ನಿಜಕ್ಕೂ ಸಾರ್ಥಕ : ಬಿಷಪ್ ಜೀವರ್ಗೀಸ್ ಮಾರ್ ಮಕರಿಯೊಸ್ ಕಲಯಿಲ್

ಕಾರ್ಕಳ: ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ.…

ಬಜಗೋಳಿ : ಜ.23ರಿಂದ 29ರವರೆಗೆ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಸ್ತಕಾಭಿಷೇಕ ಮಹೋತ್ಸವ

ಕಾರ್ಕಳ : ಧರ್ಮಶಾಲೆ ಭಗವಾನ್ 1008 ಶ್ರೀ ಮುನಿಸುವತತೀರ್ಥಂಕರರ ನೂತನ ಜನ ಬಿಂಬದ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಮತ್ತು ಭಗವಾನ್ 1008 ಶ್ರೀ ಬಾಹುಬಲಿ ಸ್ವಾಮಿಯ ಪ್ರತಿಷ್ಠಾ ಮಸ್ತಕಾಭಿಷೇಕ ಮಹೋತ್ಸವವು ಜ.23 ರಿಂದ 29ರ ವರೆಗೆ ಬಜಗೋಳಿ ಸುಮ್ಮಗುತ್ತು ಬಂಡಸಾಲೆಯಲ್ಲಿ…

ಮರ್ಣೆ ಪಂಚಾಯತ್ ನಲ್ಲಿ ತಹಶಿಲ್ದಾರ್ ಗ್ರಾಮ ವಾಸ್ತವ್ಯ: ಜನರ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲೇ ಪರಿಹರಿಸಲು ಸರಕಾರ ಬದ್ದವಾಗಿದೆ:ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್

ಕಾರ್ಕಳ: ಗ್ರಾಮೀಣ ಮಟ್ಟದ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ರಾಜ್ಯ ಸರಕಾರವು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕಾರ್ಕಳ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಹೇಳಿದರು. ಅವರು ಕಾರ್ಕಳ ತಾಲೂಕಿನ ಮರ್ಣೆ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ ತಹಶಿಲ್ದಾರ್ ಗ್ರಾಮ ವಾಸ್ತವ್ಯ…

ನಾಳೆ (ಜ. 21) ರಂದು ಮರ್ಣೆ ಪಂಚಾಯತ್ ನಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ

ಅಜೆಕಾರು : ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯತ್ ನಲ್ಲಿ ನಾಳೆ ತಹಸೀಲ್ದಾರರ ಗ್ರಾಮ ವಾಸ್ತವ್ಯ ನಡೆಯಲಿದೆ. ಮರ್ಣೆ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ಮರ್ಣೆ ಗ್ರಾಮದ ಗ್ರಾಮಸ್ಥರು ಕಂದಾಯ, ಪಂಚಾಯತ್ ರಾಜ್ ,ಆಹಾರ ಹಾಗೂ ಸರ್ವೆ ಇಲಾಖೆ ಹಾಗೂ…

ಕಾರ್ಕಳ : ನಾಳೆ 2ನೇ ಹಂತದ ಬಿಜೆಪಿ ಬೂತ್ ವಿಜಯ ಸಂಕಲ್ಪ ಅಭಿಯಾನ ಉದ್ಘಾಟನೆ

ಕಾರ್ಕಳ : ಬಿಜೆಪಿ ವತಿಯಿಂದ 2ನೇ ಬೂತ್ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನೆಯು ನಾಳೆ ಸಂಜೆ 5 ಗಂಟೆಗೆ ಇವತ್ತೂರು ಗ್ರಾಮದ ಕೊಳಕೆ ಶಾಲೆ ಬಳಿಯ ಕಾಲೋನಿಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಲಿದೆ…

ಕಾರ್ಕಳ ಮಾರಿಯಮ್ಮ ದೇವಿಯ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ : ಮಾ‌ರ್ಚ್ 9 ರಿಂದ 14 ರವರೆಗೆ ದೇವಿಗೆ ಬ್ರಹ್ಮಕಲಶೋತ್ಸವ ಸಂಭ್ರಮ- ಸಚಿವ ಸುನಿಲ್ ಕುಮಾರ್

ಕಾರ್ಕಳ: ಇತಿಹಾಸ ಪ್ರಸಿದ್ಧ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುನಿಲ್ ಕುಮಾರ್ ಮಾರಿಯಮ್ಮ ದೇವಸ್ಥಾನದ…

ನಾಳೆ (ಜ.19) ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ : ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಪಡಿಸುವ ಕಾರ್ಯಕ್ರಮವು ನಾಳೆ ಬೆಳಿಗ್ಗೆ 8:30 ಕ್ಕೆ ಸರಿಯಾಗಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಈಗಾಗಲೇ ದೇವಸ್ಥಾನದಿಂದ ಕಾಣಿಕೆಹುಂಡಿ ಪಡೆದುಕೊಂಡು ಹೋಗಿರುವ ಭಕ್ತರು ಅದು ಭರ್ತಿಯಾಗಿದ್ದಲ್ಲಿ…

ಕಾರ್ಕಳ: ಜ 22 ರಿಂದ 26ರ ವರೆಗೆ ಅತ್ತೂರು ಸಾಂತ್ ಮಾರಿ

ಕಾರ್ಕಳ: ಇತಿಹಾಸ ಪ್ರಸಿದ್ದ ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ಜನವರಿ 22ರಿಂದ 25ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ ಎಂದು ಚರ್ಚಿನ ಧರ್ಮಗುರುಗಳಾದ ಅಲ್ಬನ್ ಡಿಸೋಜ ಹೇಳಿದರು. ಅವರು ಮಂಗಳವಾರ ಚರ್ಚಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅತ್ತೂರಿನ ಸಾಂತ್ ಮಾರಿ…