Share this news

ಹೆಬ್ರಿ:ಚಾರ ಗ್ರಾಮದ ಕೊಂಡೆಜೆಡ್ಡು ಚಂದ್ರನಾಥ ಸ್ವಾಮಿ ಭಜನಾ ಮಂಡಳಿಯ ಸಭಾಂಗಣದಲ್ಲಿ ಬಾಲಗೋಕುಲ ಉದ್ಘಾಟನೆಗೊಂಡಿತು.
ನೂತನ ಬಾಲಗೋಕುಲವನ್ನು ನಂದಿತಾ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಚಾರ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಸಂಸ್ಕಾರ , ಸಂಸ್ಕೃತಿಯನ್ನು ಕಲಿಸುವ ಕಾರ್ಯ ಆಗಬೇಕಿದೆ. ಪ್ರಸ್ತುತ ಸಮಾಜದ ವಿದ್ಯಾಮಾನವನ್ನು ಅವಲೋಕಿಸಿದಾಗ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಇಚ್ಚಾಶಕ್ತಿ ಬಾಲ್ಯದಿಂದಲೇ ಬೆಳೆಸಬೇಕಿದೆ ಎಂದರು.
ಅಮೃತ ಭಾರತಿ ವಿದ್ಯಾಲಯದ ಉಪಮುಖ್ಯೋಪಾಧ್ಯಾಯರು , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾತನಾಡಿ ಗ್ರಾಮದಲ್ಲಿ ಬಾಲಗೋಕುಲ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಅತ್ಯಂತ ವೇಗವಾಗಿ ಪ್ರಾರಂಭಿಸಬೇಕಿದೆ.ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ತಮ್ಮ ಬಗೆಗೆ ಜಾಗೃತೆಯ ಭಾವದ ಅರಿವು ಬೆಳೆಸಬೇಕು .ಇದರಿಂದ ಪೋಷಕರ ಜವಾಬ್ದಾರಿ ಸ್ವಲ್ಪ ನಿರಾಳವಾಗುತ್ತದೆ. ಗ್ರಾಮದ ತಾಯಂದಿರಿಗೆ ಬಾಲಗೋಕುಲದ ಪರಿಕಲ್ಪನೆಯ , ಕಾರ್ಯಚಟುವಟಿಕೆಯ ತಿಳುವಳಿಕೆ ನೀಡಬೇಕಿದೆ ಎಂದರು.
ಮಂಗಳೂರು ಮಹಿಳಾ ವಿಭಾಗದ ಬಾಲಗೋಕುಲ ಸಹ ಸಂಯೋಜಕಿ ರಮಿತ ಶೈಲೇಂದ್ರ ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆಯಿಂದ ದೂರವಿರಿಸಲು , ಸಂಪ್ರದಾಯಿಕ ಆಟಗಳಲ್ಲಿ ತಲ್ಲೀನವಾಗಿಸಲು ಬಾಲಗೋಕುಲ ಸಹಕರಿಸುತ್ತದೆ ಎಂದು ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಗ್ರಾಮ ವಿಕಾಸ ಹೆಬ್ರಿ ತಾಲೂಕು ಸಂಯೋಜಕ ರಾಘವೇಂದ್ರ ಭಟ್, ಹೆಬ್ರಿ ತಾಲೂಕು ಮಹಿಳಾ ವಿಭಾಗದ ಸಂಯೋಜಕಿ ವೀಣಾ ಆರ್ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷೆ ಜ್ಯೋತಿ,ಬಾಲಗೋಕುಲದ ತರಗತಿಯನ್ನು ಸ್ವ ಇಚ್ಚೆಯಿಂದ ನಡೆಸಿಕೊಂಡು ಹೋಗಲು ಒಪ್ಪಿಕೊಂಡಿರುವ ನಂದಿತಾ ಕಾಮತ್, ಬಾಲಗೋಕುಲ ಕಾರ್ಕಳ ವಿಭಾಗದ ಪ್ರಮುಖರಾದ ಮಾತಾಜಿ ಸವಿತಾ, ಚಾರ ಪಂಚಾಯತ್ ಸದಸ್ಯೆ ಶಶಿಕಲಾ ಮತ್ತು ಧರ್ಮಸ್ಥಳ ಸಂಘದ ಸೇವಾ ಕಾರ್ಯಕರ್ತೆ ಲತಾ ,ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
ನಚಿಕೇತ ವಿದ್ಯಾಲಯ ಬೈಲೂರು ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಲಕ್ಷ್ಮೀ ಮಯ್ಯ ಚಾರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

 

 

                        

                          

 

Leave a Reply

Your email address will not be published. Required fields are marked *