Share this news

ಹೆಬ್ರಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಕಾರ್ಕಳ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ್ದು,ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅರ್ಜಿದಾರರಿಗೆ 4.35 ಲಕ್ಷ ಮೊತ್ತ ಪಾವತಿಸುವಂತೆ ಸೂಚಿಸಿದ್ದು,ತಪ್ಪಿದ್ದಲ್ಲಿ ,18 ತಿಂಗಳ ಶಿಕ್ಷೆ ವಿಧಿಸಿ ಕಾರ್ಕಳ ನ್ಯಾಯಾಲಯವು ಆದೇಶಿಸಿದೆ‌. ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ಕೊಡ್ಸನಬೈಲು ನಿವಾಸಿ ದಿನಕರ ಶೆಟ್ಟಿ ಎಂಬಾತ ಚೆಕ್ ಬೌನ್ಸ್ ಅಪರಾಧಿ.

ನಾಡ್ಪಾಲು ಗ್ರಾಮದ ಬೈದೆ ಬೆಳಾರ್ ನಿವಾಸಿ ಶಿವರಾಮ ಪೂಜಾರಿ ತನ್ನ ಪರಿಚಯದ ಮಡಾಮಕ್ಕಿ ಗ್ರಾಮದ ಕಾಸನಮಕ್ಕಿ ಕೊಡ್ಸನ್ ಬೈಲು ನಿವಾಸಿ ದಿನಕರ ನಾಗು ಶೆಟ್ಟಿ ಎಂಬಾತನಿಗೆ ಕಳೆದ 2016ರಲ್ಲಿ ಮೂರು ತಿಂಗಳ ಮಟ್ಟಿಗೆ 3,32 ಲಕ್ಷ ಹಣವನ್ನು ಸಾಲವಾಗಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮರುಪಾವತಿ ಮಾಡುವ ಸಲುವಾಗಿ ದಿನಕರ್ ಶೆಟ್ಟಿ 3 ಚೆಕ್ ನೀಡಿದ್ದ. ಬ್ಯಾಂಕಿನಲ್ಲಿ ಚೆಕ್ ನಗದೀಕರಣಕ್ಕೆ ಹಾಕಿದಾಗ ಅದು ಬೌನ್ಸ್ ಆಗಿತ್ತು. ಈ ಹಿನ್ನಲೆಯಲ್ಲಿ ಶಿವರಾಮ ಪೂಜಾರಿ ಕಾರ್ಕಳ ನ್ಯಾಯಾಲಯದಲ್ಲಿ ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಸುದೀರ್ಘ ವಿಚಾರಣೆ ಬಳಿಕ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಆರೋಪಿ ದಿನಕರ್ ಶೆಟ್ಟಿಯನ್ನು ಅಪರಾಧಿ ಎಂದು ಪರಿಗಣಿಸಿ, ಇನ್ನು ಒಂದು ತಿಂಗಳ ಒಳಗೆ ಖರ್ಚು ವೆಚ್ಚಗಳು ಸೇರಿ 4.35 ಲಕ್ಷ ರೂ ಹಣವನ್ನು ಶಿವರಾಮ ಪೂಜಾರಿ ಇವರಿಗೆ ನೀಡಬೇಕು ತಪ್ಪಿದ್ದಲ್ಲಿ ಮೂರು ಪ್ರಕರಣಗಳಲ್ಲಿ ತಲಾ ಆರು ತಿಂಗಳ ಪ್ರತ್ಯೇಕ ಜೈಲು ಶಿಕ್ಷೆ ಸೇರಿ ಒಟ್ಟು 18 ತಿಂಗಳ ಜೈಲು ಸಜೆಯನ್ನು ನೀಡಿ ನ್ಯಾಯಾಲಯ ಆದೇಶಿಸಿದೆ.ಅರ್ಜಿದಾರ ಶಿವರಾಮ ಪೂಜಾರಿ ಪರ ನ್ಯಾಯವಾದಿ ಎಚ್. ರತನ್ ಕುಮಾರ್ ಹೆಬ್ರಿ ವಾದಿಸಿದ್ದಾರೆ.

 

             

Leave a Reply

Your email address will not be published. Required fields are marked *