
ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ ಕಾರ್ಕಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಕಳ ಇವರು ನಡೆಸಿದ 2025-26 ಸಾಲಿನ ಹೆಬ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಪ್ರೌಢಶಾಲಾ ವಿಭಾಗದ ಸಂಸ್ಕೃತ ಭಾಷಣದಲ್ಲಿ ಪ್ರಥಮ ಸ್ಥಾನವನ್ನು ಪ್ರಣಮ್ಯ.ಕೆ, ಭರತನಾಟ್ಯದಲ್ಲಿ ಪ್ರಥಮ ಸ್ಥಾನವನ್ನು ಸೌಂದರ್ಯ ಎಂ ಆರ್ , ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನವನ್ನು ನಮನ್, ಇಂಗ್ಲಿಷ್ ಭಾಷಣದಲ್ಲಿ ದ್ವಿತೀಯ ಸ್ಥಾನವನ್ನು ಅವನಿ ಶೆಟ್ಟಿ, ಸಾಮೂಹಿಕ ಜಾನಪದ ನೃತ್ಯದಲ್ಲಿ ದ್ವಿತೀಯ ಸ್ಥಾನವನ್ನು ಪ್ರಕೃತಿ, ಆಮಿಷಾ, ಅನ್ವಿತಾ, ಸ್ತುತಿ , ಸಹನಾ, ಭೂಮಿಕಾ ತಂಡ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅಭಿನಯ ಗೀತೆಯಲ್ಲಿ ಪ್ರಾರ್ಥನಾ ಪ್ರಥಮ, ಆಶುಭಾಷಣದಲ್ಲಿ ಕೃಷ್ಣ ಓಕುಡ, ಕನ್ನಡ ಕಂಠಪಾಠದಲ್ಲಿ ಯಾದ್ವಿ ದ್ವಿತೀಯ, ಭಕ್ತಿಗೀತೆಯಲ್ಲಿ ಅಪೂರ್ವ ದ್ವಿತೀಯ, ದೇಶಭಕ್ತಿ ಗೀತೆಯಲ್ಲಿ ಆರಾಧ್ಯ ದ್ವಿತೀಯ, ಇಂಗ್ಲಿಷ್ ಕಂಠಪಾಠದಲ್ಲಿ ಮನಸ್ವಿ ಉಡುಪ ತೃತೀಯ, ಕ್ಲೇ ಮಾಡೆಲ್ ನಲ್ಲಿ ಶುಭಧರ ತೃತೀಯ ಸ್ಥಾನವನ್ನು ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಧಾರ್ಮಿಕ ಪಠಣದಲ್ಲಿ ಶ್ರೇಯಾ ಭಟ್ ದ್ವಿತೀಯ, ಆಶುಭಾಷಣದಲ್ಲಿ ಸಮರ್ಥ್ ಪೈ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಅಭಿನಂದಿಸಿದ್ದಾರೆ.

.
.
