ಬೆಂಗಳೂರು :ರಾಜಕಾರಣದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ
ಸಧ್ಯ ಸಂಸದ ಪ್ರಜ್ವಲ್ ರೇವಣ್ಣ ಇದೀಗ ವಿದೇಶದಲ್ಲಿ ತಲೆಮರಿಸಿಕೊಂಡಿದ್ದು, ಆತನನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದೇ ಸಿಎಂ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಹೊರಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿ,ಪ್ರಜ್ವಲ್ ಜತೆ ಅಶೋಕ್ ಮಾತನಾಡಿರಬಹುದು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ಮತದಾನ ಮಾಡಿ ಬಂದಾಗ ಬಂಧಿಸದೇ ಕತ್ತೆ ಕಾಯುತ್ತಿದ್ದರಾ? ಡೋರ್ ಕ್ಲೋಸ್ ಸಭೆ ಮಾಡಿ ನಿಯೋಜಿತ ಪ್ಲಾನ್ ಮಾಡಿದ್ರು ಪ್ರಜ್ವಲ್ ಹಿಡಿಯದಿದ್ದರೆ ಮೋದಿ ದೋಷಣೆ ಮಾಡಬಹುದು ಎಂಬ ಪ್ಲಾನ್ ಮಾಡಲಾಗಿತ್ತು. ಅದರಂತೆ ಸರ್ಕಾರ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಕಳುಹಿಸಿದೆ ಎಂದು ಆರೋಪಿಸಿದರು. ವಿದೇಶಕ್ಕೆ ಹೋಗುವ ಮುನ್ನ ನನ್ನ ಜೊತೆ ಮಾತನಾಡಿದರೆ ತನಿಖೆ ಮಾಡಲಿ. ನನ್ನ ಫೋನ್ ಹಾಗೂ ಸಿದ್ದರಾಮಯ್ಯ ಫೋನ್ ಕೂಡ ತನಿಖೆ ಮಾಡಲಿ. ಆಗ ಯಾರು ಯಾರ ಜೊತೆ ಮಾತನಾಡಿದರು ಎಂದು ಗೊತ್ತಾಗುತ್ತದೆ. ನಾವು ಅದಕ್ಕಾಗಿಯೇ ಪ್ರಕರಣವನ್ನು CBI ಗೆ ಕೊಡಿ ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು