ಕಾರ್ಕಳ, ಆ 22: ದೈನಂದಿನ ಬದುಕಿನಲ್ಲಿ ಹಾಸ್ಯ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಬದುಕಿನ ಭಾರ ಕಡಿಮೆಯಾಗಬೇಕಾದರೆ ನಮ್ಮ ಜೀವನದ ಜೇಬಿನೊಳಗೆ ನಿತ್ಯವೂ ಹಾಸ್ಯ ತುಂಬಿರಬೇಕು. ಜೀವನದ ಪ್ರತಿಕ್ಷಣವನ್ನು ಸಂಭ್ರಮಿಸುವುದರ ಮುಖೇನ ಬದುಕನ್ನು ಹಸನುಗೊಳಿಸಬಹುದು ಎಂದು ಎಸ್. ವಿ. ಟಿ. ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರಾಮ ಭಟ್ ಇವರು ಅಭಿಪ್ರಾಯಪಟ್ಟರು.
ಅವರು ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆ. 21 ರಂದು ಕಾರ್ಕಳ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಇದರ ತಿಂಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೈನಂದಿನ ಬದುಕಿನಲ್ಲಿ ಹಾಸ್ಯ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭ ಹೆಗ್ಡೆ ಅವರು ಸ್ವಾಗತಿಸಿದರು . ಅನುಪಮಾ ಚಿಪ್ಲುಂಕರ್ ಪ್ರಾರ್ಥಿಸಿ, ಡಾ.ಸುಮತಿ. ಪಿ ಉಪನ್ಯಾಸಕಾರರನ್ನು ಪರಿಚಯಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮಾಲತಿ. ಜಿ. ಪೈ, ಯವರು ನಿರ್ವಹಿಸಿದರು. ಬಿ. ವಿ. ಸುಲೋಚನಾ ಧನ್ಯವಾದವನ್ನಿತ್ತರು. ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸದಸ್ಯೆಯರು ಉಪಸ್ಥಿತರಿದ್ದರು.
`