ನವದೆಹಲಿ: ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳು ತಮ್ಮ ಸೋಲಿನ ಬಳಿಕ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿದ ಪರಿಣಾಮ ಸೋಲಾಗಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಆರೋಪಿಸುವುದು ಸಾಮಾನ್ಯವಾಗಿದೆ. ಯಾವುದೇ ಕಾರಣಕ್ಕೂ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ ಎಂದು ಆಯೋಗ ಪ್ರಾತ್ಯಕ್ಷಿಕೆ ಮಾಡಿ ಸವಾಲೊಡ್ಡಿದ್ದರೂ ಸೋತ ಅಭ್ಯರ್ಥಿಗಳು ಅದನ್ನು ಒಪ್ಪುತ್ತಿಲ್ಲ. ಇದೇ ಕಾರಣಕ್ಕಾಗಿ ಕೇಂದ್ರ ಚುನಾವಣಾ ಆಯೋಗವು ಅಭ್ಯರ್ಥಿಗಳಿಗೆ ಬೇಕಾದ ಮಷಿನ್ ಆಯ್ದುಕೊಂಡು ತಪಾಸಣೆ ಮಾಡುವ ವಿನೂತನ ಅವಕಾಶವನ್ನು ಕಲ್ಪಿಸಿದೆ.
ಹೀಗಾಗಿ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ 2 ಮತ್ತು 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಚುನಾವಣಾ ಆಯೋಗ ಸೂಚಿಸುವ ಶುಲ್ಕ ಕಟ್ಟಿ, ತಾವು ಸ್ಪರ್ಧಿಸಿದ ವಿಧಾನಸಭೆ ಅಥವಾ ಲೋಕಸಭಾ ಕ್ಷೇತ್ರದ ಯಾವುದೇ ಮತಯಂತ್ರಗಳನ್ನು ಆಯ್ಕೆ ಮಾಡಿಕೊಂಡು ತಪಾಸಣೆ ಮಾಡಬಹುದಾಗಿದೆ
ಈ ಕುರಿತ ಕೆಲ ಮಾರ್ಗಸೂಚಿಗಳನ್ನು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಈ ಅವಕಾಶ ಇವಿಎಂಗಳ ಕುರಿತಾದ ಇದ್ದ ಅನುಮಾನಗಳನ್ನು ನಿವಾರಿಸುತ್ತದೆ ಎಂದು ಆಯೋಗ ಹೇಳಿದೆ.
ಕಳೆದ ಜೂ.4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಿಸಿದ ಬಳಿಕ ಇವಿಎಂಗಳಲ್ಲಿ ಅಳವಡಿಸಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳನ್ನು ತಿರುಚಲಾಗಿದೆ. ಹೀಗಾಗಿ ಇವಿಎಂಗಳು ಮತ್ತು ಬನ್‌ಂðಟ್ ಮೆಮೆರಿ ಪರಿಶೀಲನೆಗೆ ಅವಕಾಶ ಕೋಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ 8 ಪರಾಜಿತ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಅಂದರೆ ಏ.26ರಂದು, ಇವಿಎಂ ಬದಲು ಹಿಂದಿನ ಮತಚೀಟಿ ವ್ಯವಸ್ಥೆಯನ್ನೇ ಮರಳಿ ತರಬೇಕೆಂದು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಆದರೆ ಇದೇವೇಳೆ, ಚುನಾವಣೆಯಲ್ಲಿ 2 ಮತ್ತು 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿನ ಮೈಕ್ರೋ ಕಂಟ್ರೋಲರ್ ಚಿಪ್‌ಗಳ ತಪಾಸಣೆಗೆ ಕೋರಿಕೆ ಸಲ್ಲಿಸಬಹುದು. ಇದಕ್ಕೆ ಆಯೋಗ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು ಎಂದು ಕೋರ್ಟ್ ಅವಕಾಶ ನೀಡಿತ್ತು. ಈ ಅವಕಾಶದ ಅನ್ವಯ ಕೇಂದ್ರ ಚುನಾವಣಾ ಆಯೋಗ ಇದೀಗ ಈ ನಿರ್ಧಾರ ಪ್ರಕಟಿಸಿದೆ.
ಅಭ್ಯರ್ಥಿಗಳಿಗೆ ಇವಿಎಂ ಪರಿಶೀಲನೆಗೆ ಏನು ಅವಕಾಶ?:
ಅಭ್ಯರ್ಥಿಗಳು ತಾವು ಸ್ಪರ್ಧಿಸಿದ ವಿಧಾನಸಭಾ ಕ್ಷೇತ್ರದ ಯಾವುದೇ ಮತಗಟ್ಟೆ ಅಥವಾ ಮಷಿನ್‌ನ ಸೀರಿಯಲ್ ನಂಬರ್ ನಮೂದಿಸಿ ಅದರ ಪರೀಕ್ಷೆಗೆ ಕೋರಿಕೆ ಸಲ್ಲಿಸಬಹುದು. ಇದಲ್ಲದೇ ಬೇರೆ ಬೇರೆ ಮತಗಟ್ಟೆಯ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಅಥವಾ ವಿವಿಪ್ಯಾಟ್ ಮಿಕ್ಸ್ ಮಾಡಿ ತಪಾಸಣೆಗೆ ಒಳಪಡಿಸುವ ಅವಕಾಶವನ್ನೂ ಆಯೋಗ ನೀಡಿದೆ.ಒಂದು ವೇಳೆ ಮಿಕ್ಸ್ ಅವಕಾಶ ಬಳಸಿಕೊಂಡರೆ, ಇವಿಎಂ ಯಂತ್ರವು ತನ್ನ ಮೂರೂ ಯುನಿಟ್‌ಗಳು ನೈಜ ಭಾಗ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ವಯಂ ತಪಾಸಣೆಗೆ ಒಳಪಡುತ್ತದೆ. ಈ ಮೂಲಕ ಮತಯಂತ್ರದ ಎಲ್ಲಾ ಮೂರು ಯುನಿಟ್‌ಗಳ ಜೊತೆ ಸಮನ್ವಯ ಸಾಧಿಸುತ್ತದೆ. ಇಂಥ ಸಮನ್ವಯ ಆದ ಬಳಿಕ ಅದನ್ನು ಪರೀಕ್ಷೆಗೆ ಅಭ್ಯರ್ಥಿಗಳಿಗೆ ನೀಡಲಾಗುವುದು.
ಇವಿಎಂಗಳ ಕುರಿತು ಅನುಮಾನ ಹೊಂದಿರುವ ಅಭ್ಯರ್ಥಿಗಳು ತಮಗೆ ನೀಡಿದ ಎವಿಎಂಗಳಲ್ಲಿ ಯಾವುದೇ ರೀತಿ ಬೇಕಾದರೂ ಅಣಕು ಮತದಾನ ನಡೆಸಬಹುದು. ಬಳಿಕ ತಾವು ಚಲಾಯಿಸಿ ಮತಗಳು ಯಾರಿಗೆ ಚಲಾವಣೆಯಾಗುತ್ತಿದೆ. ಮತ ಚಲಾವಣೆಯಾದ ಅಭ್ಯರ್ಥಿ ಪರವಾಗಿಯೇ ವಿವಿಪ್ಯಾಟ್‌ನಲ್ಲೂ ಪ್ರತಿ ಮುದ್ರಣವಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.
ಆದರೆ ಆಯೋಗವು ಇವಿಎಂ ಪರಿಶೀಲನೆಗೆ ನಿಗದಿತ ಶುಲ್ಕ ವಿಧಿಸಲಿದೆ.ಪ್ರತಿ ಯುನಿಟ್ ತಪಾಸಣೆಗೆ 40,000 ರು. ಶುಲ್ಕ ಮತ್ತು ಜಿಎಸ್ಟಿಯನ್ನು ಅಭ್ಯರ್ಥಿಗಳು ಪಾವತಿಸಬೇಕು. ಒಂದು ವೇಳೆ ಇವಿಎಂನಲ್ಲಿ ದೋಷ ಕಂಡುಬAದರೆ ಪೂರ್ಣ ಹಣ ಮರಳಿಸಲಾಗುವುದು. ಫಲಿತಾಂಶ ಪ್ರಕಟವಾದ 7 ದಿನಗಳಲ್ಲಿ ಅಭ್ಯರ್ಥಿಗಳು ಇಂಥ ಮನವಿ ಸಲ್ಲಿಸಬಹುದಾಗಿರುತ್ತದೆ. ಹಾಲಿ ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಜು.19ರ ಬಳಿಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.