ಕಾರ್ಕಳ : ಕಾರ್ಕಳದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಇಡೀ ಹಿಂದೂ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆ. ಇದೊಂದು ಪೂರ್ವನಿಯೋಜಿತ ಷಡ್ಯಂತ್ರವಾಗಿದ್ದು, ಘಟನೆಯ ಹಿಂದೆ ವ್ಯವಸ್ಥಿತ ತಂಡವಿರುವ ಶಂಕೆ ಇದೆ ಎಂದು ವಿ.ಹಿಂ.ಪ ದಕ್ಷಿಣ ಪ್ರಾಂತ ಪ್ರಮುಖ್ ಸುನಿಲ್ ಕೆ ಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಕಾರ್ಕಳದ ಹೊಟೆಲ್ ಪ್ರಕಾಶ್’ನಲ್ಲಿ ವಿ.ಹಿಂಪ-ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಜಂಟೀ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಾರ್ಕಳದಲ್ಲಿ ಈವರೆಗೆ ಇಂತಹ ಘಟನೆ ಸಂಭವಿಸಿಲ್ಲ. ಕಾರ್ಕಳದ ರಂಗನ್ ಪಲ್ಕೆ ಕಾಡಿನಲ್ಲಿ ಯುವತಿಗೆ ಅಮಲು ಪದಾರ್ಥ ನೀಡಿ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇಪ್ ಮಾಡಿರುವುದು ಜಿಹಾದಿ ಕೃತ್ಯ .ಈ ಕೃತ್ಯದ ಲವ್ ಜಿಹಾದ್ ಷಡ್ಯಂತ್ರ ಅಡಗಿದೆ. ಪೊಲೀಸ್ ಇಲಾಖೆ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಇನ್ನೊರ್ವ ಆರೋಪಿಯನ್ನು ಸಂಜೆಯೊಳಗೆ ಬಂಧಿಸಿ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಂಡು ಜಾಗೃತವಾಗಿರಬೇಕು . ಆ ನಿಟ್ಟಿನಲ್ಲಿ ಆ. 26 ರಂದು ಹಿಂದೂ ಸಂಘಟನೆ ವತಿಯಿಂದ ಕಾರ್ಕಳದ ಬಸ್ ಸ್ಟ್ಯಾಂಡ್ ನಲ್ಲಿ ಖಂಡನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಹಿಂ.ಜಾ.ವೇ ಮುಖಂಡ ಮಹೇಶ್ ಬೈಲೂರು, ಜಿಲ್ಲಾ ಪ್ರಮುಖ್ ಉಮೇಶ್ ಸೂಡ, ತಾಲೂಕು ಪ್ರಮುಖ್ ಹರೀಶ್ ಮುಡಾರು, ಶ್ರೀಕಾಂತ್ ಶೆಟ್ಟಿ, ಬಜರಂಗದಳ ಮುಖಂಡ ಮನೀಶ್ ನಿಟ್ಟೆ, ಚೇತನ್ ಪೇರಲ್ಕೆ, ಸುಧೀರ್ ನಿಟ್ಟೆ,ಗುರುಪ್ರಸಾದ್ ಸೂಡ, ಸಂತೋಷ್ ಮಾವಿನಕಟ್ಟೆ,ಮಹಿಳಾ ಪ್ರಮುಖ್ ರಮಿತಾ ರಾವ್, ಮನೋಜ್ ಕರಿಯಕಲ್ಲು ಉಪಸ್ಥಿತರಿದ್ದರು.
[
`