Share this news

ಕಾರ್ಕಳ: ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದ ಸಂಪತ್ತು ಕೆಲವೇ ಮಂದಿ ಉಧ್ಯಮಿಗಳ ಪಾಲಾಗುತ್ತಿರುವುದು ಅಪಾಯಕಾರಿ ರಾಜಕೀಯ ಬೆಳವಣಿಗೆಯಾಗಿದೆ. ‌ ಇದು ದೇಶದಲ್ಲಿ ಆರ್ಥಿಕ ಅರಾಜಕತೆ ಮತ್ತು ನಿರುದ್ಯೋಗ ಸಮಸ್ಯೆ ಹುಟ್ಟು ಹಾಕಲಿದೆ. ಇದನ್ನು ಪ್ರಜ್ಞಾಬದ್ಧರಾಗಿ ಪ್ರತಿರೋಧಿಸುವುದು ಪ್ರಜೆಗಳ ಕರ್ತವ್ಯವಾಗಿದ್ದು ಈ ಚುನಾವಣೆ ಅದಕ್ಕೆ ಪೂರಕ ಅವಕಾಶ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ರಾಷ್ಟೀಯ ನಾಯಕ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ವಿಧಾನ ಸಬಾ ಕ್ಷೇತ್ರದ ಕಾಳಿಕಾಂಬ ಶುಭದರಾವ್ ಮನೆಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾಡುತ್ತಿದ್ದರು.
ಕಾಂಗ್ರೆಸ್ ಆಡಳಿತಾವದಿಯಲ್ಲಿ 54ಲಕ್ಷ ಕೋಟಿ ಇದ್ದ ಸಾಲವನ್ನು 165 ಲಕ್ಷ ಕೋಟಿ ದಾಟಿಸಿ 200ರ ಗಡಿಗೆ ತಂದು ನಿಲ್ಲಿಸಿದವರಿಂದ ರಾಷ್ಟ್ರದ ಅಭ್ಯುಧಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ತನ್ನ ದೇಶದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತು ಚಾರಿತ್ರಿಕ ಹಿನ್ನಲೆಯ ಅರಿವಿಲ್ಲದವರು ದೇಶಕ್ಕೆ ಗುರು ಆಗಲು ಸಾಧ್ಯವಿಲ್ಲ. ಅಂತವರು ವಿಶ್ವಗುರು ಆಗಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದ ಅವರು ಒಬ್ಬ ಪ್ರಧಾನಿ ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಕರಿಮಣಿ ಮುಸ್ಲಿಮರ ಪಾಲಾದೀತು ಎಂದು ಹೇಳಿರುವುದು ಅತ್ಯಂತ ಖಂಡನೀಯ. ಈ ಚುನಾವಣೆಯಲ್ಲಿ ಮತದಾರರು ಅದಕ್ಕೆ ಸರಿಯಾದ ಉತ್ತರ ನೀಡಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಪಾರ್ಲಿಮೆಂಟಿನಲ್ಲಿ ಸಾಂವುಧಾನಿಕ ಮೌಲ್ಗಳನ್ನು ಎತ್ತಿ ಹಿಡಿದು ಜನರ ಪರವಾಗಿ ಕೆಲಸಮಾಡ ಬಲ್ಲ ಸಮರ್ಥ ಅಭ್ಯರ್ಥಿ ಎಂದರು.

ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ, ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ,ಮಾಜಿ ಪುಸಬಾ ಅಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ ಮಾತನಾಡಿದರು.

ಪುರಸಭಾ ಸದಸ್ಯ ಶುಭದ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿ ವಂದನಾರ್ಪಣೆಗೈದರು.

 

 

 

 

 

 

 

 

Leave a Reply

Your email address will not be published. Required fields are marked *