ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜು ಮಹಿಳಾ ಹಾಸ್ಟೆಲ್ ನ ಗೋಡೆಯ ಮೇಲೆ ವಿವಾದಾತ್ಮಕ ಬರಹಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳ ಮೂಲದ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಕೇರಳ ಕಾಸರಗೋಡು ಜಿಲ್ಲೆಯ ಫಾತಿಮಾ ಶಬ್ನಾ (21)ಬಂಧಿತ ಆರೋಪಿ.
ಕಳೆದ ಮೇ.7 ರಂದು ನಿಟ್ಟೆ ಕಾಲೇಜು ಮಹಿಳಾ ಹಾಸ್ಟೆಲ್ ಶೌಚಾಯಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ಕೋಮುದ್ವೇಷ ಹರಡುವ ರೀತಿಯಲ್ಲಿ ಪ್ರಚೋದನಕಾರಿ ಬರಹವನ್ನು ಬರೆಯಲಾಗಿತ್ತು. ಈ ಬಗ್ಗೆ ಮಹಿಳಾ ಹಾಸ್ಟೆಲ್ ನ ಮ್ಯಾನೇಜರ್ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಕೇರಳ ಮೂಲದ ಫಾತಿಮಾ ಶಬ್ನಾ ಳನ್ನು ಜುಲೈ .14 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.