ಕಾರ್ಕಳ: ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ಎರಡು ಮನೆಯವರ ಮಧ್ಯೆ ತಕರಾರು ಉಂಟಾಗಿ ಪರಸ್ಪರ ಮಾತಿನ ಚಕಮಕಿ ನಡೆದು, ಅವಾಚ್ಯ ಪದಗಳಿಂದ ನಿಂದಿಸಿ ಮಹಿಳೆಗೆ ತಂಡದಿಂದ ಹಲ್ಲೆ ನಡೆಸಿದ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಮಲ್ಯರಬೆಟ್ಟು ಎಂಬಲ್ಲಿನ ನಿವಾಸಿ ಮುಕ್ತಾ ಎಂಬವರು ಕೃಷಿ ಬಳಕೆಗಾಗಿ ತಮ್ಮ ಜಮೀನಿನಲ್ಲಿ ಗುರುವಾರ ಕೊಳವೆಬಾವಿ ಕೊರೆಯಲು ಬೋರ್‌ವೆಲ್ ವಾಹನ ತರಿಸಿದ್ದರು. ಬೋರ್‌ವೆಲ್ ಯಂತ್ರದಿAದ ಕೊಳವೆ ಬಾವಿ ಕೊರೆಸಲು ಮುಂದಾದಾಗ ನೆರೆಮನೆಯ ಶಂಕರ ಸೇರ್ವೇಗಾರ್ ಆಕ್ಷೇಪಣೆ ವ್ಯಕ್ತಪಡಿಸಿ, ನನ್ನ ಜಮೀನಿನಲ್ಲಿ ಈಗಾಗಲೇ ಕೊಳವೆ ಬಾವಿ ಕೊರೆಯಲಾಗಿದ್ದು ಅದರ ಪಕ್ಕದಲ್ಲಿ ನೀವು ಕೊಳವೆಬಾವಿ ತೋಡಿದರೆ ನಮಗೆ ನೀರಿನ ಸಮಸ್ಯೆ ಎದುರಾಗುತ್ತದೆ ಆದ್ದರಿಂದ ಇಷ್ಟು ಹತ್ತಿರ ಬೋರ್‌ವೆಲ್ ಕೊರೆಸಬೇಡಿ ಬೇರೆಕಡೆ ವ್ಯವಸ್ಥೆ ಮಾಡಿ ಎಂದಿದ್ದರು ಎನ್ನಲಾಗಿದೆ. ಇದಕ್ಕೆ ದೂರುದಾರರಾದ ಮುಕ್ತಾರವರು ಒಪ್ಪದಿದ್ದಾಗ ಶಂಕರ ಶೆಟ್ಟಿಯವರು £ತನ್ನ ಜಾಗದಲ್ಲಿ ನಿಲ್ಲಿಸಿರುವ ಯಂತ್ರವನ್ನು ತೆಗೆಯುವಂತೆ ಸೂಚಿಸಿದಾಗ ಎರಡು ಮನೆಯವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಮುಕ್ತಾರವರಿಗೆ ಶಂಕರ ಸೇರ್ವೇಗಾರ್, ಯಶೋಧಾ, ಅಶೋಕ,ಮಹೇಶ, ಭಾರತಿ, ಆಶಾಲತಾ,ಸುರೇಶ್,ಸಚಿನ್, ದಯಾನಂದ,ಪ್ರದೀಪ್ ಮತ್ತಿತರರು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಮುಕ್ತಾ ಅವರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ