ಕಾರ್ಕಳ: ಸಾಮಾನ್ಯ ಚರ್ಮ ಸಂಬಂಧಿತ ಸಮಸ್ಯೆಗಳಾದ ಮೊಡವೆ, ಮುಖದ ಮೇಲಿನ ನೆರಿಗೆಗಳು, ಸುಕ್ಕುಗಳು, ರೇಖೆಗಳು, ಪಿಗಮೆಂಟೇಷನ್, ಮತ್ತು ಗಾಯದ ಗುರುತುಗಳು ಮುಂತಾದ ಸಮಸ್ಯೆಗಳ ಚಿಕಿತ್ಸೆಗೆ ಕೆಮಿಕಲ್ ಪೀಲ್ ಪ್ರೂಸೀಜರ್ ಬಹಳ ಪರಿಣಾಮಕಾರಿಯಾಗಿದೆ ಎಂದು ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳದ ಚರ್ಮ ರೋಗ ವಿಭಾಗದ ತಜ್ಞೆ ಡಾ.ಅನುಷಾ ಡಿಸೋಜ ತಿಳಿಸಿದ್ದಾರೆ.
ಕಾರ್ಕಳ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ವಿಶ್ವ ಚರ್ಮ ತ್ವಚೆ ಆರೋಗ್ಯ ದಿನದ ಪ್ರಯುಕ್ತ ಕಾಸ್ಮೆಟಾಲಜಿ (ಸೌಂದರ್ಯವರ್ಧಕ) ಶಿಬಿರವನ್ನು ಜು. 22ರಿಂದ ಜು 27 ರವರೆಗೆ ಆಯೋಜಿಸಲಾಗಿದೆ. ಶಿಬಿರದಲ್ಲಿ ವೈಯಕ್ತಿಕರಿಸಿದ ಸಮಾಲೋಚನೆಯ ಜೊತೆಗೆ ಕೆಮಿಕಲ್ ಪೀಲ್ ಪ್ರೊಸೀಜರ್ ಮತ್ತು ತಜ್ಞರ ಸಮಾಲೋಚನೆ ಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುವುದು.
ಈ ಶಿಬಿರವು ಜುಲೈ 22 ಸೋಮವಾರದಿಂದ ಜು 27 ಶನಿವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 5 ರ ತನಕ ನಡೆಯಲಿದೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ: 08258-230583/9731601150 ಸಂಪರ್ಕಿಸಬಹುದಾಗಿದೆ