Share this news

ಕಾರ್ಕಳ ಸೆ.,29: ಕಾರ್ಕಳ ತಾಲೂಕಿನಲ್ಲಿ ಗೋವು ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಹೈನುಗಾರಿಕೆ ನಡೆಸಿ ಜೀವನ ನಡೆಸುತ್ತಿರುವ ರೈತರ ಬದುಕು ಅತಂತ್ರವಾಗಿದೆ.ಶಿರ್ಲಾಲಿನಲ್ಲಿ  ರೈತ ಮಹಿಳೆಯೊಬ್ಬರ ಮನೆಯ ಹಟ್ಟಿಯಿಂದಲೇ ರಾಜಾರೋಷವಾಗಿ ತಲವಾರು ತೋರಿಸಿ ದನಗಳ ಕಳ್ಳತನ ನಡೆದಿದೆ.ತಡೆಯಲು ಬಂದ ಮಹಿಳೆಗೆ ಮಾರಕಾಸ್ತ್ರದಿಂದ ಬೆದರಿಸಿರುವುದು ಅತಂಕಕಾರಿ ಘಟನೆ ಖಂಡನೀಯ ಎಂದು ಕಾರ್ಕಳ ತಾಲೂಕು ಬಿಜೆಪಿ ಯುವಮೋರ್ಚಾ ರಾಕೇಶ್ ಶೆಟ್ಟಿ ಹೇಳಿದ್ದಾರೆ.
ಪೋಲಿಸರ ಭಯವಿಲ್ಲದೇ ಗೋವು ಕಳ್ಳತನ ನಡೆಯುವುದನ್ನು ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಈ ರೀತಿಯ ಘಟನೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದು ಪರೋಕ್ಷ ವಾಗಿ ಪೊಲೀಸ್ ಇಲಾಖೆ ಬೆಂಬಲ ಈ ದುಷ್ಕರ್ಮಿಗಳಿಗೆ ಸಿಗುತ್ತಿದೆಯೋ ಎನ್ನುವ ಅನುಮಾನ ಮೂಡಿದ್ದು
ಈ ರೀತಿಯ ಪ್ರಕರಣ ಕಾರ್ಕಳದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ ಆದರೆ ಪೋಲಿಸ್‌ ಇಲಾಖೆ ದನಗಳ್ಳರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ. ಒಂದು ರೀತಿಯಲ್ಲಿ ರಾಜ್ಯ ಕಾಂಗ್ರೆಸ್ಸ್‌ ಸರ್ಕಾರದ ಓಲೈಕೆ ನೀತಿಯು ಗೋ ಕಳ್ಳರಿಗೆ ವರದಾನ ಆದಂತಿದೆ.ಈ ದುಷ್ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಸಮಸ್ತ ಹಿಂದೂ ಸಮಾಜ ತಮ್ಮ ರಕ್ಷಣೆಗೆ ಬೀದಿಗಿಳಿದು ಪೊಲೀಸ್ ಠಾಣೆಯ ಮುಂದೆಯೇ  ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ ಕುಕ್ಕುಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *