Share this news

ಕಾರ್ಕಳ: ಉಡುಪಿ ಜಿಲ್ಲೆಯಲ್ಲಿಯೇ ನಿರಂತರವಾಗಿ ಅಮೋಘ ಫಲಿತಾಂಶವನ್ನು ನೀಡುತ್ತಿರುವ ಕಾರ್ಕಳ ತಾಲೂಕಿನ ಹಿರ್ಗಾನದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ವಿಜ್ಞಾನ ವಿಭಾಗ ಮಾತ್ರವಲ್ಲದೇ ವಾಣಿಜ್ಯ ವಿಭಾಗದಲ್ಲಿಯೂ ರಾಜ್ಯಮಟ್ಟದಲ್ಲಿ ಅಗ್ರ ರಾಂಕ್ ಗಳನ್ನು ಪಡೆದುಕೊಂಡಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೊದಲ ದಿನದಿಂದಲೇ ತರಬೇತಿ ನೀಡಲಾಗುತ್ತಿದೆ. ಏಳು ಉಪನ್ಯಾಸಕರು ಸೇರಿಕೊಂಡು ನಿರ್ಮಿಸಿದ ಈ ಸಂಸ್ಥೆ ಇಂದು ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾಲೇಜು ಎಂಬ‌ ಹೆಗ್ಗಳಿಕೆಗೆ ಪಾತ್ರವಾಗಿದೆ.ಕೇವಲ ಶೈಕ್ಷಣಿಕ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿಕೊಂಡು ಬಂದಿದೆ.

ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಹತ್ತು ರಾಂಕ್ ಗಳಲ್ಲಿ ವಾಣಿಜ್ಯ ವಿಭಾಗಕ್ಕೆ 3 ರಾಂಕ್ 2022-23 ನೆ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷವೂ ಶೆ.100 ರಷ್ಟು ಫಲಿತಾಂಶದ ಜೊತೆ ಅನಘ (ಮೂರನೇ ರಾಂಕ್) ದಿವಿತ್ ಗೌಡ(ಏಳನೇ ರಾಂಕ್) ಹಾಗೂ ಅಕ್ಷತಾ ಪೈ( ಹತ್ತನೇ ರಾಂಕ್) ನ್ನು ಪಡೆದಿರುತ್ತಾರೆ.

CA ಫೌಂಡೇಷನ್ ಅರ್ಹತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ:

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ CA ಫೌಂಡೇಶನ್ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜ್ ನ 20 ವಿದ್ಯಾರ್ಥಿ ಗಳು ತೇರ್ಗಡೆ ಹೊಂದಿರುತ್ತಾರೆ
ಪ್ರಥಮ ಪಿಯುಸಿಯಿಂದಲೇ ವಿಶೇಷ ತರಬೇತಿ ನೀಡುತ್ತಿದ್ದು ಅತ್ಯುತ್ತಮ ಹಾಗೂ ಕಡಿಮೆ ಶುಲ್ಕದೊಂದಿಗೆ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.

CSEET ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ಪ್ರತಿ ವರ್ಷ ದಾಖಲೆಯ ಫಲಿತಾಂಶ:

ICSI ನಡೆಸುವ ಕಂಪನಿ ಸೆಕ್ರೆಟರಿಯ ಅರ್ಹತಾ ಪರೀಕ್ಷೆಯಲ್ಲಿ ಈ ಶೈಕ್ಷಣಿಕ ವರ್ಷದ 23 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಿರಂತರ ನುರಿತ ಉಪನ್ಯಾಸಕ ರಿಂದ ತರಬೇತಿ ನೀಡಲಾಗುತ್ತಿದೆ.
ಇದಲ್ಲದೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಲಿ ಪ್ರೈಮ್, ಪೈತಾನ್, ಕಮ್ಯುನಿಕೇಶನ್ ಸ್ಕಿಲ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕ್ರೀಡೆ, ಸಾಂಸ್ಕೃತಿಕ , ಸಾಹಿತ್ಯ, ರಾಷ್ಟ್ರೀಯ ಸೇವಾ ಯೋಜನೆ, ಕೆಸರಾಟ ಪಾಠ, ಯಕ್ಷಗಾನ, ಕೈಗಾರಿಕೆ ಭೇಟಿ ಸಂಗೀತ ತರಬೇತಿ ಗಳು ಹಾಗೂ ವ್ಯಕ್ತಿತ್ವ ವಿಕಸನ ಶಿಬಿರಗಳನ್ನುನೀಡಲಾಗುತ್ತಿದೆ. ವಿಶೇಷವಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟಮಟ್ಟದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಸಜ್ಜುಗೊಳಿಸಲಾಗುತ್ತಿದೆ

 

 

 

 

Leave a Reply

Your email address will not be published. Required fields are marked *