
ಬೆಂಗಳೂರು,ನ.29: ರಾಜ್ಯದಲ್ಲಿ ಚಳಿ ಶುರುವಾಗಿದ್ದು, ಇದರ ನಡುವೆ ಸಣ್ಣ ಪ್ರಮಾಣದಲ್ಲಿ ಇಂದು (ನ.29) ಮತ್ತು ನಾಳೆ (ನ.30) ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳ ಕೆಲವು ಪ್ರದೇಶದಲ್ಲಿ ಚಂಡಮಾರುತದ ಪ್ರಭಾವ ಇದ್ದು, ಈ ಭಾಗದಲ್ಲಿ ಮಳೆಯಾಗುವ ಸಾಧ್ಯ ಇದೆ. ಇಲಾಖೆ ತಿಳಿಸಿರುವಂತೆ ಮುಂದಿನ 3 ದಿನಗಳಲ್ಲಿ ಅಂದರೆ ನವೆಂಬರ್ 29ರಿಂದ ಡಿಸೆಂಬರ್ 2ರ ವರೆಗೂ ರಾಜ್ಯದಲ್ಲಿ ಮಿಶ್ರ ವಾತಾವರಣ ಇರಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಂಗಳೂರಿನ ಕೆಲವೊಂದು ಕಡೆ ರೆಡ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಡಿ 1ರಂದು ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
.
