
ಕಾರ್ಕಳ, ನ.17: ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2025 ಡಿಸೆಂಬರ್ 12,13,14 ರಂದು ನಡೆಯಲಿರುವ ದೃಢಕಲಶಾಭಿಶೇಕದ ಆಮಂತ್ರಣ ಪತ್ರಿಕೆಯನ್ನು ನ. 16ರಂದು ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬೋರ್ಕಟ್ಟೆ ಗಣಪತಿ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಉದ್ಯಮಿ ಆನಂದ ಶೆಟ್ಟಿ ಮಂಜೆ ಮನೆ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ತಾರಾನಾಥ್ ಕೋಟ್ಯಾನ್ ಸೂರಾಲು, ಪ್ರಧಾನ ಅರ್ಚಕರ ಹರಿದಾಸ್ ಭಟ್, ಪ್ರಮುಖರಾದ,ಸತ್ಯೇಂದ್ರ ನಾಯಕ್, ಮಂಜುನಾಥ್ ನಾಯಕ್,ಮಾಧವ ಕಾಮತ್ ,ಶ್ಯಾಮ ಎನ್.ಶೆಟ್ಟಿ ಕಿಶೋರ್ ಶೆಟ್ಟಿ,ಪಾರ್ಶ್ವನಾಥ ಜೈನ್, ರಘುನಾಥ್ ಶೆಟ್ಟಿ, ಸುರೇಶ್ ಶೆಟ್ಟಿ ಸುಕೀರ್ತಿ ಶೆಟ್ಟಿ ರೋಹಿತ್ ಶೆಟ್ಟಿ,ಪ್ರಿಯ ಶೆಟ್ಟಿ,ಸುಧಾಕರ ಆಚಾರ್ಯ,ರಮೇಶ್ ಶೆಟ್ಟಿ ಮಂಜೊಟ್ಟು,ಸತೀಶ್ ಕಾಮತ್, ಸುಧಾಕರ ನಾಯ್ಕ್, ಸಾದು ಮೂಲ್ಯ, ಉಮೇಶ್ ಕಾಡಂಬಳ,ಉಷಾ ಡಿ. ಬಂಗೇರ, ರಮಾಕಾಂತ ಶೆಟ್ಟಿ, ಕೃಷ್ಣಮೂರ್ತಿ ಇರ್ವತ್ರಾಯ, ಧನಂಜಯ್ ಶೆಟ್ಟಿ,ಕರುಣಾಕರ ಶೆಟ್ಟಿ,ಕೃಷ್ಣ ಶೆಟ್ಟಿ, ಬೋಜ ದೇವಾಡಿಗ, ಮೋಹನ್ ನಾಯಕ್, ಅಮಣಿ ದೇವಾಡಿಗ, ವೇದಾ ರಾಜೇಶ್ ಹಾಗೂ ದೇವಸ್ಥಾನದ ಭಕ್ತಾಬಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

