Share this news

ಬೆಂಗಳೂರು, ಮಾ.05: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಅತ್ಯಾಧುನಿಕ ಡಿಜಿಟಲ್ ಬೋರ್ಡ್ ಹಾಗೂ ಇತರೆ ಹೈಟೆಕ್ ಪರಿಕರಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿಯೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಸ್ಮಾರ್ಟ್ ಕಲಿಕಾ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಕೆಳಗಿನ ಉಪಕರಣಗಳನ್ನು ವಿತರಿಸಲಾಗುತ್ತಿದೆ.
ಕೇವಲ ಪಠ್ಯಪುಸ್ತಕದ ಬೋಧನೆಗೆ ಸೀಮಿತವಾಗದೇ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳ ಮೂಲಕ ಮಕ್ಕಳಿಗೆ ಕಠಿಣ ವಿಷಯಗಳನ್ನು ಸುಲಭವಾಗಿ ಮನದಟ್ಟು ಮಾಡಿಕೊಡುವುದು ಈ ಯೋಜನೆಯ ಆಶಯವಾಗಿದೆ. ಇಂಟರಾಕ್ಟೀವ್ ಬೋರ್ಡ್ಗಳ ಬಳಕೆಯಿಂದ ಶಿಕ್ಷಕರು ಅಂತರ್ಜಾಲದಲ್ಲಿರುವ ಶೈಕ್ಷಣಿಕ ವಿಡಿಯೋಗಳು, ಅನಿಮೇಷನ್ ಮತ್ತು ಗ್ರಾಫಿಕ್ಸ್ಗಳನ್ನು ಬಳಸಿ ಪಾಠ ಮಾಡಬಹುದಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಕುತೂಹಲ ಮೂಡಿಸುವುದಲ್ಲದೆ, ಹಾಜರಾತಿ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.

ಆಯ್ದ ಶಾಲೆಗಳಿಗೆ 3,767 ಅತ್ಯಾಧುನಿಕ ಸ್ಪರ್ಶ ಸಂವೇದಿ ಡಿಸ್‌ಪ್ಲೇ ಬೋರ್ಡ್ಗಳು, ತರಗತಿ ಸಂದರ್ಭದಲ್ಲಿ ತಡೆರಹಿತ ಬೋಧನೆಗೆ ಅನಿಯಮಿತ ವಿದ್ಯುತ್ ಪೂರೈಕೆಗೆ 3,767 ಯುಪಿಎಸ್ ಮತ್ತು ಬ್ಯಾಟರಿಗಳ ವ್ಯವಸ್ಥೆ ಕಲ್ಪಿಸಲಾಗುವುದು. ಇದಲ್ಲದೇ ಆಯ್ದ ಶಾಲೆಗಳಿಗೆ 109 ಎಲ್‌ಇಡಿ ಪ್ರೊಜೆಕ್ಟರ್‌ಗಳ ವಿತರಿಸಾಗುತ್ತದೆ. ಈ ಯೋಜನೆಗೆ ಒಟ್ಟು 89.66 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದು, ಖರೀದಿ ಪ್ರಕ್ರಿಯೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ನಿಗದಿತ ಸಮಯದೊಳಗೆ ಆಯಾ ಶಾಲೆಗಳಿಗೆ ಉಪಕರಣಗಳನ್ನು ತಲುಪಿಸಿ, ಅಳವಡಿಸಲು ಸೂಚನೆ ನೀಡಲಾಗಿದೆ. ಅಲ್ಲದೆ, ಈ ಡಿಜಿಟಲ್ ಉಪಕರಣಗಳನ್ನು ಸಮರ್ಥವಾಗಿ ಬಳಸಲು ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ಕಾರ್ಯಕ್ರಮವನ್ನೂ ಇಲಾಖೆ ಹಮ್ಮಿಕೊಳ್ಳಲಿದೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *