Share this news

ಶ್ರೀನಗರ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನ.10ರಂದು ನಡೆದ ಭೀಕರ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಸ್ಫೋಟಿಸಿದ್ದ ಪ್ರಮುಖ ಆರೋಪಿ ಡಾ. ಉಮರ್ ನಬಿಯ ಸ್ವಗ್ರಾಮ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿನ ಅವನ ಮನೆಯನ್ನು ಭದ್ರತಾ ಪಡೆಗಳು ಸ್ಪೋಟಿಸಿ ಸಂಪೂರ್ಣವಾಗಿ ನೆಲ ಸಮಮಾಡಿವೆ.

ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟವೊಂದು ಸಂಭವಿಸಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿ ಹಿಂದಿದ್ದ ಡಾ. ಉಮರ್ ನಬಿ ಮನೆಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಆತನ ಮನೆ ಇತ್ತು. ಈ ಉಮರ್ ಮೊನ್ನೆ ತಾನಿದ್ದ ಕಾರನ್ನೇ ಸ್ಫೋಟಿಸಿಕೊಂಡಿದ್ದ, ಆ ಸ್ಫೋಟದಲ್ಲಿ ತಾನೂ ಸಾವನ್ನಪ್ಪಿದ್ದ. ಡಿಎನ್​ಎಯಿಂದ ಅದು ಆತನದಲ್ಲೇ ಮೃತದೇಹ ಎಂಬುದು ಕೂಡ ದೃಢಪಟ್ಟಿದೆ. ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 10ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು ಮತ್ತು ಹಲವಾರು ಜನರು ಗಾಯಗೊಂಡಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *