ಹೆಬ್ರಿ : ಅಖಿಲ ಭಾರತ ಮಾಧ್ವ ಮಹಾಮಂಡಲ, 30 ನೇ ತತ್ವಜ್ಞಾನ ಸಮ್ಮೇಳನ – ಪೆರಣಂಕಿಲ – 2025 ಇದರ ಪೂರ್ವಭಾವಿಯಾಗಿ ಪರಮಪೂಜ್ಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವದ ಅಂಗವಾಗಿ ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಸನ್ನಿಧಿಯಲ್ಲಿ ತತ್ವಜ್ಞಾನ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಸದಾ ದೇವರ ಚಿಂತನೆ ಮಾಡಿದಲ್ಲಿ ಮನುಷ್ಯನಲ್ಲಿ ಕೋಪ, ಉದ್ವೇಗ ಕಡಿಮೆ ಆಗಲು ಸಾಧ್ಯ. ದೇವಸ್ಥಾನಗಳಲ್ಲಿ ಭಕ್ತಿಯಿಂದ ಭಜನೆ ಮಾಡುವುದೂ ಒಂದು ಸೇವೆ ಎಂದು ವಿದ್ವಾನ್ ಸಗ್ರಿ ಆನಂದತೀರ್ಥ ಉಪಾಧ್ಯಾಯರು ಶ್ರೀ ಜಂಗಮೇಶ್ವರ ಮಠದ ವರ್ಧಂತ್ಯುತ್ಸವದ ಸಂದರ್ಭದಲ್ಲಿ ಪ್ರವಚನ ನೀಡಿದರು.
ಅಜೆಕಾರು ವಲಯ ಬ್ರಾಹ್ಮಣ ಸಂಘದ ಸದಸ್ಯರಿಂದ ವಿಷ್ಣುಸಹಸ್ರನಾಮ, ಸಂಕೀರ್ತನೆ, ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವಿದ್ವಾನ್ ಗುಡ್ಡೆಅಂಗಡಿ ರಾಘವೇಂದ್ರ ಭಟ್ , ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಅಜೆಕಾರು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ ಪುತ್ರಾಯ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸಂದೀಪ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕ್ ಉದ್ಯೋಗಿ ಕಾಡುಹೊಳೆ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
