Share this news

 

ಮಂಗಳೂರು,ಜು,26:ಧರ್ಮಸ್ಥಳ ಪರಿಸರದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎನ್ನುವ ಅನಾಮಿಕ ವ್ಯಕ್ತಿಯ ಹೇಳಿಕೆ ಹಿನ್ನೆಲೆಯಲ್ಲಿ ಸರ್ಕಾರ ಎಸ್ಐಟಿ ತನಿಖೆ ಆದೇಶಿಸಿದ ಬೆನ್ನಲ್ಲೇ ಇಂದಿನಿಂದಲೇ ತನಿಖೆ ಆರಂಭವಾಗಲಿದೆ.

ಪ್ರಕರಣದ ತನಿಖೆಗೆ ಇಂದು ಎಸ್ಐಟಿ ಅಧಿಕಾರಿಗಳ ತಂಡ ಧರ್ಮಸ್ಥಳಕ್ಕೆ ತೆರಳಿದ್ದು, ಇಂದಿನಿಂದ ತನಿಖೆಗೆ ಚಾಲನೆ ಸಿಗಲಿದೆ.
ಎಸ್ಐಟಿ ಮುಖ್ಯಸ್ಥ ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದ ಅಧಿಕಾರಿಗಳ ತಂಡವು ಬೆಳ್ತಂಗಡಿಯಲ್ಲಿ ಕಚೇರಿ ತೆರೆಯಲಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಕ್ವಾಟ್ರಸ್’ನಲ್ಲೇ ಎಸ್ಐಟಿ ಕಚೇರಿ ಆರಂಭಿಸಲಿದೆ ಎನ್ನುವ ಮಾಹಿತಿ ಲಭಿಸಿದೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ), ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ಆದೇಶಿಸಿದೆ.

 

 

Leave a Reply

Your email address will not be published. Required fields are marked *