Share this news

ಮಂಗಳೂರು, ಆಗಸ್ಟ್ 20 ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದಾಗಿ ಅನಾಮಿಕ ನೀಡಿದ ದೂರಿನ ಆಧಾರದಲ್ಲಿ 16 ದಿನ 17 ಪಾಯಿಂಟ್‌ಗಳಲ್ಲಿ ಅಗೆದಿದ್ದ ಎಸ್‌ಐಟಿ ತಂಡಕ್ಕೆ ಎರಡು ಕಡೆ ಮಾತ್ರ ಅಸ್ಥಿಪಂಜರದ ಕುರುಹು ಸಿಕ್ಕಿತ್ತು. ನಂತರ ಧರ್ಮಸ್ಥಳ ಪ್ರಕರಣ ವಿಧಾನಸಭೆ ಕಲಾಪದಲ್ಲೂ ಸದ್ದು ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಸದನದಲ್ಲಿ ಸೋಮವಾರ ಉತ್ತರ ನೀಡಿದ ಗೃಹಸಚಿವ ಡಾ. ಜಿ ಪರಮೇಶ್ವರ್, ಸದ್ಯಕ್ಕೆ ತಾತ್ಕಾಲಿಕವಾಗಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದೇವೆ ಎಂದಿದ್ದಾರೆ.

ಸದ್ಯ ಧರ್ಮಸ್ಥಳದ ವಿವಿಧೆಡೆ ಅಗೆದಿರುವ ಮಣ್ಣು ಮತ್ತು ಸಿಕ್ಕಿರುವ ಅಸ್ಥಿಪಂಜರದ ಕುರುಹುಗಳನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​ಎಲ್) ಕಳುಹಿಸಲಾಗಿದೆ. ವರದಿ ಬಂದ ಬಳಿಕ ತನಿಖೆ ಚುರುಕುಗೊಳ್ಳಳಲಿದ್ದು, ಮತ್ತೆ ಎರಡ್ಮೂರು ಕಡೆ ಮೂಳೆಗಾಗಿ ಶೋಧ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ವಾರಾಂತ್ಯದಲ್ಲೇ ಎಫ್​ಎಸ್​ಎಲ್ ವರದಿ ಎಸ್ಐಟಿ ಕೈಸೇರಲಿದೆ. ಇದರಲ್ಲಿ ಪ್ರಮುಖವಾಗಿ ಮೂರು ಅಂಶಗಳ ಬಗ್ಗೆ ಉಲ್ಲೇಖ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *