Share this news

ಮಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನ ಹೂತುಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ದೂರು ನೀಡಿದ್ದು, ಈ ಸಬಂಧ ರಾಜ್ಯ ಸರ್ಕಾರ ಎಸ್​ಐಟಿ ತನಿಖೆಗೆ ಆದೇಶಿದೆ. ಅದರಂತೆ ಇದೀಗ ಎಸ್​ಐಟಿ ತನಿಖೆ ತೀವ್ರಗೊಳಿಸಿದೆ. ಜುಲೈ 28 ರಂದು ಧರ್ಮಸ್ಥಳ ಫೀಲ್ಡ್‌ಗೆ ಇಳಿದಿದ್ದ ಎಸ್‌ಐಟಿ ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿದ್ದು, ಇದೀಗ ಭೂಮಿ ಅಗೆಯುವ ಕೆಲಸ ಶುರುವಾಗಿದೆ. ಈ ನಡುವೆ ಎಸ್​ಐಟಿ ಅಧಿಕಾರಿಗಳು ಸಹಾಯವಾಣಿ ಆರಂಭಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿಗಾಗಿ 0824-2005301ಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ.

ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಒಂದೊಂದೆ ಜಾಗಗಳನ್ನು ಅಗೆದು ಶೋಧ ನಡೆಸುತ್ತಿರುವ ಎಸ್ ಐ ಟಿ ತಂಡ ದೂರುದಾರ ಸೂಚಿಸಿದ 5 ಸ್ಥಳಗಳಲ್ಲಿ ಈಗಾಗಲೇ ಹುಡುಕಾಟ ನಡೆಸಿದ್ದಾರೆ. ಆದರೆ ಇಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.

ಮಾಸ್ಕ್ ಧರಿಸಿರುವ ಅನಾಮಿಕ ವ್ಯಕ್ತಿ ತಾನು ಈಗಾಗಲೇ ನೂರಾರು ಶವಗಳನ್ನು ನೇತ್ರಾವತಿ ನದಿ ತೀರದಲ್ಲಿ ಹೂತು ಹಾಕಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದ. ಅದರಂತೆ ನಿನ್ನೆ ಎಸ್‌ಐಟಿ ಆತ ತೋರಿಸಿದ್ದ ಜಾಗದಲ್ಲಿ ಉತ್ಖನನ ನಡೆಸಿತ್ತು. ಭಾರೀ ಮಳೆಯ ನಡುವೆಯೇ ತೀವ್ರ ಬಂದೋಬಸ್ತ್‌ನಲ್ಲಿ ಹುಡುಕಾಟ ನಡೆಸಲಾಗಿತ್ತು. ಆದರೆ ಆತ ತೋರಿಸಿದ ಮೊದಲ ಜಾಗದಲ್ಲಿ ಯಾವುದೇ ಅಸ್ಥಿ ಪಂಜರ ಸಿಕ್ಕಿರಲಿಲ್ಲ. ಬಳಿಕ ಆತನೇ ಗುರುತು ಮಾಡಿದ್ದ 2 ಹಾಗೂ 3ನೇ ಜಾಗದಲ್ಲೂ ಎಸ್‌ಐಟಿ ಟೀಂ ಜಾಲಾಡಿತ್ತು. ಆದರೆ ಅಲ್ಲೂ ಯಾವುದೇ ಅಸ್ಥಿಪಂಜರ, ಯಾವುದೇ ತಲೆ ಬುರುಡೆ ಸೇರಿದಂತೆ ಏನೊಂದು ಕುರುಹೂ ಪತ್ತೆಯಾಗಿರಲಿಲ್ಲ.

ಜುಲೈ 28 ರಂದು ಧರ್ಮಸ್ಥಳ ಫೀಲ್ಡ್‌ಗೆ ಇಳಿದಿದ್ದ ಎಸ್‌ಐಟಿ ದೂರುದಾರನನ್ನ ಕರೆದೊಯ್ದು 13 ಸ್ಥಳ ಗುರುತು ಮಾಡಿತ್ತು. ನಿನ್ನೆ ಆತನ ಸಮ್ಮುಖದಲ್ಲೇ ನೇತ್ರಾವತಿ ತಟದಲ್ಲಿ ಗುಂಡಿ ತೋಡಲಾಗಿತ್ತು. ಆದರೆ ಅಲ್ಲಿ ಯಾವುದೇ ಶವ, ಅಸ್ಥಿಪಂಜರ ಸಿಕ್ಕಿರಲಿಲ್ಲ. ಜುಲೈ 30 ರಂದು ನಾಲ್ಕು ಕಡೆ ಮತ್ತೆ ಶೋಧ ನಡೆಸಲಾಗಿತ್ತು. ಇಂದೂ ಕೂಡ ಉತ್ಖನನ ಕಾರ್ಯ ನಡೆಯುತ್ತಿದ್ದು  ಪ್ರಕರಣದ ಬಗ್ಗೆ  0824-2005301ಕ್ಕೆ ಮಾಹಿತಿ ನೀಡುವಂತೆ ತಿಳಿಸಿದೆ.

 

 

 

 

 

 

Leave a Reply

Your email address will not be published. Required fields are marked *