Share this news

ಕಾರ್ಕಳ,ಆ.06: ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಮಾತಾಡಿದವರನ್ನು ಪಕ್ಷದಿಂದ ಉಚ್ಚಾಟಿಸುವ ಧೋರಣೆ ಹೊಸತೇನಲ್ಲ. ಕಾಂಗ್ರೆಸ್ ಪಾಳಯದ ನಾಯಕ ಮುನಿಯಾಲು ಉದಯ ಶೆಟ್ಟಿ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಮುನಿಯಾಲು ಉದಯ ಶೆಟ್ಟಿಯವರ ಸರ್ವಾಧಿಕಾರಿ ಧೋರಣೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ತಿಳಿದಿದೆ. ಮೈತುಂಬ ದ್ವೇಷ, ನಿಂದನೆ ಮತ್ತು ದಮನಕಾರಿ ರಾಜಕೀಯದ ಕೊಳಕು ಮೆತ್ತಿಕೊಂಡಿರುವ ಅವರು ಯಾರೇ ಸತ್ಯ ಮಾತಾಡಿದರೂ ಅವರನ್ನು ಬಾಯಿ ಮುಚ್ಚಿಸುವ, ಕೀಳು ಮನಸ್ಸಿನ ನಾಯಕ. ಈ ಹಿಂದೆ ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ದಿ. ಗೋಪಾಲ ಭಂಡಾರಿ, ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಶೇಖರ್ ಮಡಿವಾಳ ಇಂತಹ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರನ್ನು ಕಡೆಗಣಿಸಿ,ಮೂಲೆಗುಂಪಾಗಿಸಿದ ಕೀರ್ತಿ ಇದೇ ಉದಯ ಶೆಟ್ಟಿಯವರಿಗಿದೆ. ಇದೀಗ ಕೃಷ್ಣ ಶೆಟ್ಟಿಯವರ ಮೇಲೂ ಅದನ್ನೇ ಪ್ರಯೋಗಿಸಲಾಗುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅವಕಾಶವಾದಿತನದ ಮೂಲಕ ಉದಯ ಶೆಟ್ಟಿ ಬೆಳೆದು ಬಂದಿದ್ದಾರೆ, ಅವರ ಪಕ್ಷದವರೇ ಅವರನ್ನು ಹೆಡೆಮುರಿಕಟ್ಟಿ ಹೊರದಬ್ಬುವ ದಿನ ದೂರವಿಲ್ಲ.ಇನ್ನೊಬ್ಬರು ಬೆಳೆಯಬಾರದು, ಅಭಿವೃದ್ದಿ ಆಗಬಾರದೆನ್ನುವ ಅವರ ಸ್ವಾರ್ಥ ರಾಜಕೀಯ ನಡೆ ಕೇವಲ ಕಾಂಗ್ರೆಸಿಗರಿಗಷ್ಟೇ ಅಲ್ಲ, ಇಡೀ ಕ್ಷೇತ್ರಕ್ಕೂ ಅದರಿಂದ ನಷ್ಟ ಉಂಟಾಗುತ್ತಿದೆ. ಕಳೆದ ಚುನಾವಣೆ ಬಳಿಕ ಸೋಲಿನ ಹತಾಶೆಯಿಂದ ವರ್ತಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ, ದಿನದಿಂದ ದಿನಕ್ಕೆ ಸುಳ್ಳು ಹೇಳುವ, ಪಕ್ಷ ಬದಲಿಸುವ ಅವರ ನಾಟಕ ಎಲ್ಲರಿಗೂ ಗೊತ್ತಾಗಿದೆ. ಇಂತಹವರು ಯಾವ ಪಕ್ಷಕ್ಕೂ ನಂಬಿಕಸ್ತರಾಗಲು ಯೋಗ್ಯರಲ್ಲ, ಬಿಜೆಪಿ ಸರಕಾರದ ಅವಧಿಯಲ್ಲಿ ಅವರು ಎಲ್ಲೆಲ್ಲಿ ಏನೇನು‌ ಲಾಭ ಪಡೆದುಕೊಂಡಿದ್ದಾರೆ ಎನ್ನುವುದನ್ನು ಒಂದು ವಾರದೊಳಗೆ ಬಹಿರಂಗಪಡಿಸುತ್ತೇವೆ ಎಂದು ರಾಕೇಶ್ ಶೆಟ್ಟಿ ಹೇಳಿದ್ದಾರೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *