ಕಾರ್ಕಳ: ನಮ್ಮ ಸಂಪಾದನೆಯಲ್ಲಿ ಒಂದಂಶ ವನ್ನು ನಾವು ನಮ್ಮ ಸಮಾಜಕ್ಕೆ ಕೊಟ್ಟರೆ ನಮ್ಮ ಬದುಕು ಸಾರ್ಥಕವಾಗುತ್ತದೆ.ಒಳ್ಳೆಯದು ಮಾಡಿದರೆ ಒಳ್ಳೆಯದೇ ಬರುತ್ತದೆ.,ಕೆಟ್ಟದ್ದು ಮಾಡಿದರೆ ಕೆಟ್ಟದ್ದೇ ಬರುತ್ತದೆ.ಹಾಗಾಗಿ ಒಳ್ಳೆಯದನ್ನೇ ಮಾಡೋಣ ಎಂದು ಕಂದಾಯ ಇಲಾಖೆಯ ನಿವೃತ್ತ ನೌಕರ ಮಧುಸೂದನ ಜೋಶಿ ಅಭಿಮತ ವ್ಯಕ್ತಪಡಿಸಿದರು.
ಅವರು ತಾಲೂಕಿನ ಮಾಳ ಕೂಡಬೆಟ್ಟು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ ಸುಪುತ್ರ ಧೀರಜ್ ಜೋಶಿ ಮತ್ತು ಸೂರಜ್ ಜೋಶಿ ಅವರು ವಿದ್ಯಾರ್ಥಿಗಳಿಗೆ ಕೊಡಮಾಡಿದ ಉಚಿತ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಕೆ.ಶಶಿಧರ್ ಭಟ್, ಉಪಾಧ್ಯಕ್ಷೆ ಶ್ರೀಮತಿ ವಿಜಯಾ ಬಾಲಕೃಷ್ಣ ಹೆಗ್ಡೆಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರಭಾವತಿ,ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಮೊಯ್ಲಿ, ಶ್ರೀಮತಿ ರೇವತಿ ಮಧುಸೂದನ ಜೋಶಿ, ಶಾಲೆಯ ಶಿಕ್ಷಕ ವೃಂದ,ಪಾಲಕರು ಉಪಸ್ಥಿತರಿದ್ದರು.
ಶ್ರೀಮತಿ ಪ್ರಭಾವತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ರಾಧಾಕೃಷ್ಣ ಜೋಶಿ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭ ದಾನಿಗಳನ್ನು ಸಾಂಕೇತಿಕವಾಗಿ ಗೌರವಿಸಲಾಯಿತು.