ಕಾರ್ಕಳ:ಮರಾಠಿ ಸಮಾಜ ಸೇವಾ ಸಂಘ ಕಾರ್ಕಳ ಇದರ ವತಿಯಿಂದ ಅನಾರೋಗ್ಯ ಪೀಡಿತರಾದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.
ಕಾರ್ಕಳ ತಾಲೂಕಿನ ಬೇಲಾಡಿ ಗ್ರಾಮದ ಶಿವಪ್ರಸಾದ್ ಮಧುಮೇಹದಿಂದ ತನ್ನ ಕಾಲನ್ನು ಕಳೆದುಕೊಂಡು ಜೀವನ ನಿರ್ವಹಣೆ ಮಾಡಲು ಅಸಾಧ್ಯವಾಗಿದ್ದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಹಾಗೂ ವಿಶೇಷ ಸಾಮರ್ಥ್ಯದ ಮಗುವಿನ ವಿದ್ಯಾಭ್ಯಾಸಕ್ಕಾಗಿ ದಾನಿಗಳ ನೆರವಿನಿಂದ 25 ಸಾವಿರ ರೂಪಾಯಿ ಚೆಕ್ಕನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶೇಖರ ಕಡ್ತಲ, ನಿಕಟಪೂರ್ವ ಅಧ್ಯಕ್ಷರಾದ ಶಂಕರ ನಾಯ್ಕ್ ದುರ್ಗ,ಪ್ರಧಾನ ಕಾರ್ಯದರ್ಶಿ ಹರೀಶ್ ನಾಯ್ಕ್ ಇರ್ವತ್ತೂರು, ಕೋಶಾಧಿಕಾರಿ ಶ್ರೀನಿವಾಸ ನಾಯ್ಕ್ ನಕ್ರೆ,ಸಂಘದ ಸದಸ್ಯರಾದ ಸತೀಶ್ ನಾಯ್ಕ್ ,ಬೇಲಾಡಿ ಉಪಸ್ಥಿತರಿದ್ದರು.