Share this news

ಕಾರ್ಕಳ ಆ.30: ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇದರ ವತಿಯಿಂದ ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ಒಟ್ಟು 10 ಲಕ್ಷ ರೂ. ಮೌಲ್ಯದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವಿನಾಶ್ ಶೆಟ್ಟಿಯವರ ಸಾಮಾಜಿಕ ಕಾರ್ಯ ಇತರರಿಗೂ ಪ್ರೇರಣಾದಾಯಕ. ಕಳೆದ ಬಾರಿ ಬಡ ಮಕ್ಕಳಿಗೆ ನೋಟ್ ಪುಸ್ತಕ ಬ್ಯಾಗ್ ವಿತರಿಸಿದ್ದು,ಈ ಬಾರಿ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಮತ್ತೆ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.ಅಮ್ಮನ ನೆರವು ಇಲ್ಲದೆ ನಾವ್ಯಾರು ಬದುಕಲು ಸಾಧ್ಯವಿಲ್ಲ.ಅಂತಹ ಅಮ್ಮನ ನೆನಪಲ್ಲಿ ಟ್ರಸ್ಟ್ ಆರಂಭ ಮಾಡಿದ್ದೂ ಒಳ್ಳೆಯ ವಿಚಾರ ಎಂದು ಶ್ಲಾಘಿಸಿದರು.
ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸ್ಥಾಪಕರಾದ ಗಣರಾಜ್ ಶೆಟ್ಟಿಯವರು ಶಿಕ್ಷಣ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ಕಲಿತ ಶಿಕ್ಷಣದಿಂದ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವುದು ಮುಖ್ಯ.ಮುಂದಿನ ದಿನಗಳಲ್ಲಿ ಅವಿನಾಶ್ ಶೆಟ್ಟಿಯವರ ಜತೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಪ್ರಾಸ್ತಾವಿಕ ಮಾತನಾಡಿದರು.ಕೃಷ್ಣ ರಾಜ್ ಹೆಗ್ಡೆ,ಪ್ರಶಾಂತ್ ಶೆಟ್ಟಿ,ಮೋಹನ್ ಶೆಟ್ಟಿ,ತ್ರಿವಿಕ್ರಮ್ ಕಿಣಿ,ಮಾಲಿನಿ ಜೆ ಶೆಟ್ಟಿ,ಸಂತೋಷ್ ವಾಗ್ಲೆ,ಕನಸುಗಾರ ನವೀನ್ ಬೈಲೂರ್ ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿದರು

                        

                          

                        

                          

 

`

Leave a Reply

Your email address will not be published. Required fields are marked *