ಕಾರ್ಕಳ: ಜೇಸಿಐ ಕಾರ್ಕಳ ರೂರಲ್ ನ ವತಿಯಿಂದ ಜುಲೈ.1 ರಂದು ಸಮೃದ್ಧಿ ಎಂಟರ್ಪ್ರೈಸಸ್ ನಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ವೈದಕೀಯ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಜನಪ್ರಿಯ ವೈದ್ಯರಾದ ಡಾ. ರವಿರಾಜ್ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಿಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೇಸಿ ಅರುಣ್ ಪೂಜಾರಿ ಮಾಂಜ,ವಲಯ ನಿರ್ದೇಶಕರಾದ ಜೇಸಿ ಮಂಜುನಾಥ್ ಕೋಟ್ಯಾನ್,ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಸಂತೋಷ್ ಬಂಗೇರ, ಸ್ಥಾಪಕರಾದ ಜೇಸಿ ಸತೀಶ್ ಪೂಜಾರಿ, ಮಾರ್ಗದರ್ಶಕರಾದ ಪ್ರಕಾಶ್ ಕಾರ್ಕಳ,ರ್ಪೂರ್ವಾಧ್ಯಕ್ಷರಾದ ಜೇಸಿ ಮೋಹನ್ ನಕ್ರೆ, ಜೇಸಿ ವೀಣಾ ರಾಜೇಶ್, ಜೇಸಿ ಶೋಭಾ ಭಾಸ್ಕರ್,ಜೂನಿಯರ್ ಜೇಸಿ ದಿಯಾ ಭಂಡಾರಿ ಸದಸ್ಯರಾದ ಜೇಸಿ ತಾರಾನಾಥ್ ಕೋಟ್ಯಾನ್ ಜೇಸಿ ಅಜಯ್ , ಜೇಸಿ ಸುಧೀರ್ ಪೂಜಾರಿ, ಜೇಸಿ ಶಾಲಿನಿ ಸುವರ್ಣ, ಜೇಸಿ ವರ್ಷಿತ್, ರಿಯಾ ಉಪಸ್ಥಿತರಿದ್ದರು.