Share this news

ಹೆಬ್ರಿ: ವರದಕ್ಷಿಣೆ ಹಾಗೂ ಆಸ್ತಿಗಾಗಿ ಗಂಡ ಹಾಗೂ ಆತನ ಮನೆಯವರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಶ್ವಿನಿ ಎಂಬವರು ತನ್ನ ಪತಿ ಹಾಗೂ ಆತನ ಗಂಡನ ಮನೆಯವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಶ್ವಿನಿ ಎಂಬಾಕೆಯನ್ನು ಚಾರ ಗ್ರಾಮದ ರಾಘವೇಂದ್ರ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಬಳಿಕ ಪತಿ ಹಾಗೂ ಅತ್ತೆ ಸಂಜೀವಿ,ಮೈದುನ ಸುಬ್ರಹ್ಮಣ್ಯ,ನಾದಿನಿ ನಾಗಶ್ರೀ ಹಾಗೂ ಆಕೆಯ ಗಂಡ ಸುಭಾಸ್ ವಿನಾ ಕಾರಣ ಕಿರುಕುಳ ನೀಡಿದ್ದು ಮಾತ್ರವಲ್ಲದೇ ತನ್ನ ವಿರುದ್ಧ ಸುಳ್ಳು ಅಪವಾದಗಳನ್ನು ಹೊರಿಸಿ ಕಿರುಕುಳ ನೀಡಿದ್ದಾರೆ ಎಂದು ಅಶ್ವಿನಿ ದೂರಿದ್ದಾರೆ. ಇದಲ್ಲದೇ ಮದುವೆಯಾದ ಬಳಿಕ ಬಟ್ಟೆಬರೆ ಹಾಗೂ ಔಷಧಿಯ ಖರ್ಚು ನೀಡದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದಲ್ಲದೇ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು ಹಾಗೂ ಅಶ್ವಿನಿಯ ಅಜ್ಜಿಯ ಹೆಸರಿನಲ್ಲಿರುವ ಆಸ್ತಿಯನ್ನು ರಾಘವೇಂದ್ರನ ಹೆಸರಿಗೆ ಬರೆದುಕೊಡುವಂತೆ ಆತನ ಮನೆಯವರ ಬೆದರಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಇದರಿಂದ ಭಯಗೊಂಡ ಅಶ್ವಿನಿ ಮಂಡಾಡಿಜೆಡ್ಡಿನ ತನ್ನ ತವರು ಮನೆಗೆ ಹೋಗಿದ್ದು ಆರೋಪಿಗಳು ಈಕೆಯ ಮನೆಗೆ ಬಂದು ನಿನ್ನನ್ನು ಮತ್ತು ಮನೆಯವರನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಶ್ವಿನಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿಉದ್ದಾರೆ.
ಹೆಬ್ರಿ ಪೊಲೀಸರು ಪತಿ ರಾಘವೇಂದ್ರ ಹಾಗೂ ಆತನ ಮನೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ

 

 

 

Leave a Reply

Your email address will not be published. Required fields are marked *