
ಕಾರ್ಕಳ,ಮಾ.22 :ಸಮುದಾಯದ ಪ್ರತಿಯೊಂದು ಮಗುವು ಶಿಕ್ಷಣವನ್ನು ಪಡೆಯಬೇಕು. ಅದಕ್ಕೆ ಪ್ರತಿಯೊಬ್ಬ ಮಗುವಿನ ಪೋಷಕರು ಉತ್ತೇಜನವನ್ನು ನೀಡಬೇಕು. ಶಿಕ್ಷಣವನ್ನು ಪಡೆದಾಗ ನಾವು ಸದೃಢರಾಗುತ್ತೇವೆ. ಇಂತಹ ವೇದಿಕೆಗಳನ್ನು ಮಕ್ಕಳಿಗೆ ಒದಗಿಸಿಕೊಟ್ಟಾಗ ಅವರು ಕಲಿಯುತ್ತಾರೆ , ಬೆಳೆಯುತ್ತಾರೆ. ಹಾಗಾಗಿ ಶಿಕ್ಷಣದಿಂದ ಸಬಲೀಕರಣ ಸಾಧ್ಯ ಎಂದು ಎನ್.ಎಂ.ಪಿ.ಟಿ ಪಣಂಬೂರು ಮಂಗಳೂರಿನ ಸುಕುಮಾರ್ ನಾಯ್ಕ್ ಹೇಳಿದರು.
ಅವರು ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಅರ್ಬಿ ದುರ್ಗ ಇಲ್ಲಿ ವರ್ಷಾವಧಿ ನಡೆಯುವ ನೇಮೋತ್ಸವದ ಅಂಗವಾಗಿ ಬ್ರಹ್ಮಶ್ರೀ ಮೊಗೇರ ಮಹಿಳಾ ಮಂಡಳಿಯ ವತಿಯಿಂದ ನಡೆದ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಕಳ ಇಂಡಸ್ಟ್ರಿಯಲ್ ಏರಿಯಾದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಭಟ್, ಉದ್ಯಮಿ ರಾಮಚಂದ್ರ ನಾಯ್ಕ್, ಲಲಿತಾ ರಾಮಚಂದ್ರ ನಾಯ್ಕ್,
ದುರ್ಗ ಗ್ರಾಮ ಪಂಚಾಯತ್ ನ ನಿಕಟಪೂರ್ವ ಉಪಾಧ್ಯಕ್ಷರಾದ ಮಹೇಶ್ ರಾವ್, ಬ್ರಹ್ಮಶ್ರೀ ಮೊಗೇರ ದೈವಸ್ಥಾನದ ಸಮಿತಿಯ ಅಧ್ಯಕ್ಷ ರಮೇಶ್ ಅಂಬಡೆಮಾರು. ಗುರಿಕಾರರಾದ ಸಂಜೀವ ಕಾಡಂಬಳ, ಸಾಧು ಅಂಬಡೆಮಾರು, ದಿನೇಶ್ ಕಾಡಂಬಳ, ಮಾಣಿಗ ಕುರ್ಕಲಪಲ್ಕೆ ಹಾಗೂ ದೈವಸ್ಥಾನದ ಊರ-ಪರವೂರ ಭಕ್ತಾಭಿಮಾನಿಗಳು, ಹತ್ತು ಸಮಸ್ತರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೈವಸ್ಥಾನದ ಆಡಳಿತ ಮೊಕ್ತೇಸರ ಅರ್ಬಿ ಸುಬ್ರಾಯ ಪಾಠಕ್ ವಹಿಸಿದ್ದರು. ಲಕ್ಷ್ಮಿ ಸುಬ್ರಾಯ ಪಾಠಕ್ ಉದ್ಘಾಟಿಸಿದರು.
ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಜಯ ಕಾಡಂಬಳ ಸ್ವಾಗತಿಸಿದರು. ಕೃತಿ ವಂದಿಸಿದರು. ಪ್ರತಿಮಾ ದೇವದಾಸ್ ನಿರೂಪಿಸಿದರು.















.
.
.
.
.
.
.
.
.
.
