ಅಜೆಕಾರು: ಎಳ್ಳಾರೆ ಗ್ರಾಮದ ಮುಳ್ಕಾಡು ಶಾಲೆಯಲ್ಲಿ ಕರಾಟೆ ತರಬೇತಿ ಕಾರ್ಯಾಗಾರವು ಜರುಗಿತು.
ಕರಾಟೆ ಗುರು ಸೋಮನಾಥ್ ಕರಾಟೆ ತರಬೇತಿ ಶಿಬಿರವನ್ನು ಉದ್ಘಾಟಿಸಿ, ಗ್ರಾಮಾಂತರ ಪ್ರದೇಶದಲ್ಲಿರುವ ಮುಳ್ಕಾಡು ಸರ್ಕಾರಿ ಶಾಲೆ ಖಾಸಗಿ ಶಾಲೆಯನ್ನು ಮೀರಿಸುವಂತಹ ಎಲ್ಲಾ ಸೌಲಭ್ಯವನ್ನು ಹೊಂದಿದೆ, ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಶಿಕ್ಷಣ ಅಗತ್ಯವಿರುವುದಾಗಿ ಹೇಳಿದರು.
SDMC ಅಧ್ಯಕ್ಷ ಸತೀಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜತೆಗೆ ಕರಾಟೆ ,ಯೋಗ ಶಿಕ್ಷಣ ,ಯಕ್ಷಗಾನ ತರಬೇತಿ ಮುಂತಾದ ಕಲೆಗಳು ಕೂಡ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿದೆ, ಈ ನಿಟ್ಟಿನಲ್ಲಿ ನಮ್ಮ ಮುಳ್ಕಾಡು ಶಾಲೆಯಲ್ಲಿ ಕರಾಟೆ ಶಿಕ್ಷಣ ತರಬೇತಿ ಉದ್ಘಾಟನೆ ಆಗುತ್ತಿರುವುದು ಸಂತೋಷದ ವಿಷಯ ಎಂದರು.
ಕರಾಟೆ ಶಿಕ್ಷಕಿ ವಿಜಯಲಕ್ಷ್ಮಿ ಇವರು ತರಬೇತಿ ಬಗ್ಗೆ ಮಾಹಿತಿ ನೀಡಿ, ಕರಾಟೆ ಶಿಕ್ಷಣವು ವ್ಯಕ್ತಿಯ ಆರೋಗ್ಯಪೂರ್ಣ ವ್ಯಕ್ತಿತ್ವ ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಅಲ್ಲದೇ ಆತ್ಮ ರಕ್ಷಣೆಗಾಗಿ ಇಂತಹ ಕಲೆ ಅಗತ್ಯವೆಂದು ತಿಳಿಸಿದರು.ಮುಖ್ಯೋಪಾಧ್ಯಾಯರಾದ ಜನಾರ್ಧನ ಬೆಳಿರಾಯ ಸ್ವಾಗತಿಸಿದರು.ನಿಶಾ ಇವರು ವಂದಿಸಿದರು. ಸುಭಾಸ್ ಇವರು ನಿರೂಪಿಸಿದರು.ಶ್ವೇತಾ ಪ್ರಫುಲ್ಲ,ರೂಪ,ಕಲಾವತಿ ಇವರು ಸಹಕರಿಸಿದರು.
