Share this news

ಕಾರ್ಕಳ: ಪಂಡಿತರತ್ನ ಎಡ್ತೂರು ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ವತಿಯಿಂದ ಟ್ರಸ್ಟ್ ಅಧ್ಯಕ್ಷ ಜಿತೇಂದ್ರ ಕುಮಾರ್ ಅವರು ಇರ್ವತ್ತೂರು ಆದಿನಾಥ ಬಸದಿಗೆ ಕೊಡುಗೆಯಾಗಿ ನೀಡಿದ ಗ್ರಂಥ ಭಂಡಾರದ ಸ್ಥಾಪನಾ ಕಾರ್ಯಕ್ರಮ ಇರ್ವತ್ತೂರು ಆದಿನಾಥ ಬಸದಿಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹಾಗೂ ಮೂಡಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಗ್ರಂಥ ಭಂಡಾರವನ್ನು ಬಸದಿಗೆ ಸಮರ್ಪಿಸಿದರು.
ಇದೇವೇಳೆ ದಶಲಕ್ಷಣ ಹಾಗೂ ಇಷ್ಟೋಪದೇಶ ಎಂಬ ಎರಡು ಕೃತಿಗಳನ್ನು ಉಭಯ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,ಎಡ್ತೂರು ಶಾಂತಿರಾಜ ಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಿತೇಂದ್ರ ಕುಮಾ‌ರ್, ಬೆಂಗಳೂರು,ಪದ್ಮಗಂಧಿ ಉಪಸ್ಥಿತರಿದ್ದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿನಾಥ ಬಸದಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಗುಣಪಾಲ ಕಡಂಬ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಪದಾಧಿಕಾರಿಗಳಾದ ಪ್ರಜಾವಾಣಿ ನಿವೃತ್ತ ಸಂಪಾದಕ ಪದ್ಮಾರಾಜ ದಂಡವತೆ,ಮಹಾವೀರ ಜೈನ್,ಸುರೇಶ್ , ಇರ್ವತ್ತೂರು ಗ್ರಾ.ಪಂ ಅಧ್ಯಕ್ಷ ಭರತ್ ಕುಮಾರ್ ಜೈನ್, ಪವರ್ ಪಾಯಿಂಟ್ ಮಾಲೀಕ ಮಹಾವೀರ ಹೆಗ್ಡೆ ಮುಡಾರು, ಶಾಂತಿರಾಜ ಜೈನ್ ಶಿರ್ಲಾಲು ಉಪಸ್ಥಿತರಿದ್ದರು.
ಉದಯ ಕುಮಾರ್ ಜೈನ್ ಸ್ವಾಗತಿಸಿದರು

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *