Share this news

ಬೆಂಗಳೂರು: ಸುಳ್ಯ ತಾಲೂಕಿನ ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಹರೆಯದ ಯುವತಿ ಮನೆಯವರನ್ನು ನಂಬಿಸಿ ಬಳಿಕ ವಿಮಾನ ನಿಲ್ದಾಣದಿಂದಲೇ ಪ್ರಿಯಕರನ ಜತೆ ಎಸ್ಕೇಪ್ ಆಗಲು ಯತ್ನಿಸಿ ಸಿಕ್ಕಿಬಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿ ಕಳೆದ ಆಗಸ್ಟ್ 25 ರಂದು ಉನ್ನತ ವ್ಯಾಸಂಗಕ್ಕೆ ಮನೆ ಬಿಟ್ಟಿದ್ದಳು. ಯುವತಿಯ ಪೋಷಕರು ಅವಿದ್ಯಾವಂತರಾದ ಕಾರಣ ಮಗಳು ಹೇಳುವ ಕತೆಯನ್ನು ನಿಜವೆಂದೇ ನಂಬಿದ್ದರು. ತನ್ನ ಜತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿಯೂ ಪೋಷಕರಿಗೆ ನಂಬಿಸಿದ್ದಳು.

ಅದರಂತೆ ವಿಮಾನ ನಿಲ್ದಾಣದವರೆಗೂ ಗೆಳತಿಯರ ಜೊತೆ ಹೋದ ದೀಕ್ಷಾ ಬಳಿಕ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಗೆಳತಿಯರು ವಾಪಾಸ್ ಬಂದಿದ್ದರು. ವಿಚಿತ್ರ ಏನೆಂದರೆ ಯುವತಿ ತನ್ನ ಗೆಳತಿಯರಿಗೆ ತನಗೆ ಅಪ್ಪ ಅಮ್ಮ ಇಲ್ಲವೆಂದೇ ಕಥೆ ಕಟ್ಟಿ ಅವರಿಂದ ಹಣದ ಸಹಾಯ ಪಡೆದಿದ್ದಳು ಎನ್ನಲಾಗಿದೆ.ಯುವತಿ ಪೋಷಕರು ತಮ್ಮ ಮಗಳು ವಿದೇಶಕ್ಕೆ ಹೋದಳೆಂದು ನಂಬಿದ್ದರೆ, ವಿಮಾನ ನಿಲ್ದಾಣದಲ್ಲಿ ಸವಣೂರು ಮೂಲದ ಅನ್ಯಕೋಮಿನ ಯುವಕ‌ನ ಜತೆ ಸೇರಿದ ಯುವತಿ ಬಳಿಕ ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು‌. ಆದರೆ ಆ ಬಸ್ಸಿನ ನಿರ್ವಾಹಕ ಅನುಮಾನಗೊಂಡು ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ಮಾಹಿತಿ ಹೋಗಿತ್ತು. ಬಳಿಕ ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವ ಯುವತಿ ಕೊಲ್ಲಮೊಗ್ರಿನವಳು ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ನಂತರ ಬೆಂಗಳೂರಿಗೆ ತೆರಳಿದ ದೀಕ್ಷಾ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕಳೆದ 28ರಂದು ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತ ಪೋಷಕರಲ್ಲಿ ಸುಳ್ಳು ಹೇಳಿ ಓದಿ ಉತ್ತಮ ಉದ್ಯೋಗ ಪಡೆದು ಭವಿಷ್ಯ ರೂಪಿಸಬೇಕಿದ್ದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಬಲೆಗೆಬಿದ್ದು ಪೋಷಕರಿಗೆ ವಂಚಿಸಿ ತಮ್ಮ ಭವಿಷ್ಯ ಹಾಳು‌ಮಾಡಿಕೊಳ್ಳುವ ಯುವತಿಯರು ತಮ್ಮ ಭವಿಷ್ಯದ ಕುರಿತು ಕಿಂಚಿತ್ತೂ ಯೋಚನೆ ಮಾಡದೇ ಇಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ವಿಪರ್ಯಾಸವೇ ಸರಿ

                        

                          

                        

                       

Leave a Reply

Your email address will not be published. Required fields are marked *