ಉಡುಪಿ : ಉಡುಪಿ ನಗರಸಭಾ ಪೌರ ನೌಕರರ ಸಂಘದ ವತಿಯಿಂದ ನಿವೃತ್ತರಾಗುತ್ತಿರುವ ಪೌರಾಯುಕ್ತ ರಾಯಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಅ. 29 ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸನ್ಮಾನ ಸ್ವೀಕರಿಸಿದ ಪೌರಾಯುಕ್ತ ರಾಯಪ್ಪ ಮಾತನಾಡಿ, ಮೊದಲು ನಾವು ಸರಿಯಾಗಿರಬೇಕು. ಆಗ ಇನ್ನೊಬ್ಬರು ನಮ್ಮ ನೋಡಿ ಕಲಿಯುತ್ತಾರೆ. ಆ ಮನೋಭಾವನೆ ಅಧಿಕಾರಿಗಳಲ್ಲಿ ಮುಖ್ಯವಾಗಿ ಇರಬೇಕು. ಅಧಿಕಾರ ಸಿಕ್ಕಿದ ಕೂಡಲೇ ದರ್ಪ ತೋರಿಸುವ ಬದಲು, ಸಮಸ್ಯೆ ಪರಿಹಾರಕ್ಕೆ ಬರುವ ಜನರನ್ನು ಕೂರಿಸಿ, ಗೌರವ ಕೊಡಬೇಕು. ಮುಂದೆ ಆ ಗೌರವ ನಮಗೆ ಸಿಗುತ್ತದೆ ಎಂದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದು ಗಾಡಿಯ ಚಕ್ರ ಇದ್ದಂತೆ. ಇಬ್ಬರು ಒಂದೇ ರೀತಿ ಹೋದರೆ ಮಾತ್ರ ಆಡಳಿತವನ್ನು ಉತ್ತಮವಾಗಿ ನಡೆಸಲು ಸಾಧ್ಯವಾಗುತ್ತದೆ ಎಂದ ಅವರು, ಉಡುಪಿಯಲ್ಲಿ ಕಸ ವಿಲೇವಾರಿ ಹಾಗೂ ನೀರಿನ ಸಮಸ್ಯೆ ಬಗೆಹರಿಸಿರುವುದರಿಂದ ನನಗೆ ತುಂಬಾ ತೃಪ್ತಿ ತಂದಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಸಂಘದ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕಾರ್ಯದರ್ಶಿ ಬೇಬಿ, ಕೋಶಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.
ವಿಪಕ್ಷ ನಾಯಕ ರಮೇಶ್ ಕಾಂಚನ್, ನಗರಸಭೆ ಸದಸ್ಯರಾದ ವಿಜಯ ಕೊಡವೂರು, ಗಿರೀಶ್ ಅಂಚನ್, ಅಮೃತಾ ಕೃಷ್ಣಮೂರ್ತಿ, ಯೋಗೀಶ್ ಸಾಲ್ಯಾನ್, ಮಾಜಿ ಅಧ್ಯಕ್ಷ ಯುವರಾಜ್, ಗಣೇಶ್ ಕೊರಗ, ಅಧಿಕಾರಿಗಳು ಮಾತನಾಡಿದರು. ಪ್ರಕಾಶ್ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು


































































