

ಕಾರ್ಕಳ: ಅಜೆಕಾರು ನಾಡಕಚೇರಿಯ ಉಪ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಮಿತಾ ಅವರು ಉಡುಪಿ ತಾಲೂಕು ಕಚೇರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ನಾಡ ಕಚೇರಿಯಲ್ಲಿ ಸನ್ಮಾನಿಸಿ ಬಿಳ್ಕೊಡಲಾಯಿತು.
ನಾಡಕಚೇರಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರ ವತಿಯಿಂದ ನಮಿತಾ ಅವರಿಗೆ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂತನ ಉಪ ತಹಸೀಲ್ದಾರ್ ಆಗಿ ಮಹೇಶ್ ಅಧಿಕಾರ ವಹಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಮರ್ಣೆ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಅಜೆಕಾರು ಸಿಎ ಬ್ಯಾಂಕ್ ನಿರ್ದೇಶಕಿ ವಿಜೇತಾ ಪೈ, ಕಂದಾಯ ನಿರೀಕ್ಷಕ ರಿಯಾಜ್, ಗ್ರಾಮ ಆಡಳಿತಾಧಿಕಾರಿ ರವಿಚಂದ್ರ ಪಾಟೀಲ್,ಪ್ರಮೋದ್ ಸುವರ್ಣ, ಪ್ರಶಾಂತ್, ಮಾರುತಿ, ಶ್ರೇಯಾ, ನಿವೇದಿತಾ, ಅನಿತಾ,ಗ್ರಾಮ ಸಹಾಯಕರಾದ ಉದಯ ನಾಯ್ಕ್, ವಿಜಯಾ, ಸುಜಯಾ, ಪ್ರವೀಣ, ದಿನೇಶ,ಸದಾನಂದ, ಅಟಲ್ ಜೀ ಜನಸ್ನೇಹಿ ಕೇಂದ್ರದ ಆಪರೇಟರ್ ಸುರೇಂದ್ರ ಮುಂತಾದವರು ಉಪಸ್ಥಿತರಿದ್ದರು.



