
ಹೈದರಾಬಾದ್, ಅ.31: ಕಾಂಗ್ರೆಸ್ ನಾಯಕ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತೆಲಂಗಾಣ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ
ರಾಜಭವನದಲ್ಲಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಜಿಷ್ಣುದೇವ್ ವರ್ಮಾ ಅವರು ಮೊಹಮ್ಮದ್ ಅಜರುದ್ದೀನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಜರುದ್ದೀನ್ ಅವರ ಸೇರ್ಪಡೆಯೊಂದಿಗೆ, ತೆಲಂಗಾಣ ಕ್ಯಾಬಿನೆಟ್ ಈಗ 16 ಸಚಿವರನ್ನು ಹೊಂದಿದೆ, ವಿಧಾನಸಭಾ ಬಲದ ಆಧಾರದ ಮೇಲೆ ರಾಜ್ಯಕ್ಕೆ ಒಟ್ಟು 18 ಮಂತ್ರಿಗಳಿಗೆ ಅವಕಾಶ ನೀಡಿರುವುದರಿಂದ ಇನ್ನೂ ಎರಡು ಸ್ಥಾನಗಳು ಖಾಲಿ ಉಳಿದಿವೆ.
ಈ ವರ್ಷದ ಜೂನ್ ನಲ್ಲಿ ಬಿಆರ್ ಎಸ್ ಶಾಸಕ ಮಗಂತಿ ಗೋಪಿನಾಥ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನಲೆಯಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು. ರಾಜ್ಯಪಾಲರ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡ ಅಜರುದ್ದೀನ್ ಅವರು ಇನ್ನೂ ರಾಜ್ಯಪಾಲ ವರ್ಮಾ ಅವರ ಔಪಚಾರಿಕ ಅನುಮೋದನೆಗಾಗಿ ಕಾಯುತ್ತಿದ್ದಾರೆ.




