Share this news

 

 

 

 

 

 

 

ಕಾರ್ಕಳ, ಮಾ.30: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ದಾಮೋದರ ಶೆಟ್ಟಿ ಎಂಬವರ ಮಗ ನವವಿವಾಹಿತ ಸುದೀಪ್ ರೈ ವಿಷ ಸೇವಿಸಿ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದ ಕುರಿತು ಸ್ಪೋಟಕ ತಿರುವು ಸಿಕ್ಕಿದೆ. ಫೇಸ್‌ಬುಕ್ ಮೂಲಕ ಕಾರ್ಕಳದ ಬಂಗ್ಲೆಗುಡ್ಡೆಯ ಕಜೆ ನಿವಾಸಿ ಸೌಮ್ಯ ಶೆಟ್ಟಿ ಪರಿಚಯವಾಗಿದ್ದ ಸುದೀಪ್ ರೈ ಬಳಿಕ ಕಾರ್ಕಳದ ಸೌಮ್ಯ ಶೆಟ್ಟಿಯವರ ಮನೆಗೆ ಬಂದು ತದನಂತರ ಸಮೀಪದ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿ ಬಳಿಕ ಫೆಬ್ರವರಿ 17ರಂದು ಪುತ್ತೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತನ ಸಾವಿನ ಕುರಿತು ಹತ್ತಾರು ಸಂಶಯಗಳು ಮೂಡಿದೆ. ತನ್ನ ಮಗನ ಸಾವಿನ ಪತ್ನಿ ಸೌಮ್ಯ ಶೆಟ್ಟಿಯೇ ಕಾರಣ ಎಂದು ಸುದೀಪ್ ರೈ ತಂದೆ ದಾಮೋದರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುದೀಪ್ ರೈ ಜೊತೆ ಸೌಮ್ಯ ಶೆಟ್ಟಿಗೆ ನಾಲ್ಕನೇ ಮದುವೆ?
ಸೌಮ್ಯ ಶೆಟ್ಟಿ ನಾಟಕ ರಂಗದಲ್ಲಿ, ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಸಾಮಾಜಿಕವಾಗಿ ಗುರುತಿಸಿಕೊಂಡವಳು.ಈಕೆಗೆ ಕಳೆದ 9 ವರ್ಷಗಳ ಹಿಂದೆ ಕಾರ್ಕಳದ ಯುವಕನ ಜೊತೆ ಮದುವೆಯಾಗಿ ಬಳಿಕ ಕೆಲ ವರ್ಷದ ನಂತರ ಗಂಡನ ನಡತೆ ಸರಿಯಿಲ್ಲವೆಂದು ಆರೋಪಿಸಿ ಆತನಿಂದ ವಿಚ್ಚೇದನ ಪಡೆದಿರುವುದಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾಳೆ, ಈ ನಡುವೆ ತಮಿಳುನಾಡು ಮೂಲದ ಯುವಕನ ಜೊತೆ ಮದುವೆಯಾಗಿ ಬಳಿಕ ಆತನನ್ನು ಕೂಡ ಬಿಟ್ಟಿದ್ದಳು ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಈ ನಡುವೆ ನಾಟಕ ಕಲಾವಿದನ ಪರಿಚಯವಾಗಿ ಆತನೊಂದಿಗೆ ಮದುವೆಯಾಗಿ ಬಳಿಕ ಆತನಿಗೆ ಮಹಿಳೆಯರ ಚಟ ಇದೆ ಎಂಬ ಕಾರಣಕ್ಕಾಗಿ ವಿಚ್ಚೇದನ ನೀಡಿದೆ ಎಂದು ಹೇಳಿದ್ದಾಳೆ. ಇದಾದ ಬಳಿಕ ಫೇಸ್ ಬುಕ್ ಮೂಲಕ ಪರಿಚವಾಗಿದ್ದೇ ನೆಲ್ಯಾಡಿಯ ಉದ್ಯಮಿ ಸುದೀಪ್ ರೈ. ಆತನಿಗೆ ತನ್ನ ಪೂರ್ವಪರ ಗೊತ್ತಿದ್ದರೂ ಮನೆಯವರ ಒಪ್ಪಿಗೆ ಪಡೆಯದೇ ನನ್ನ ಜೊತೆ ಮದುವೆಯಾಗಿದ್ದಾನೆ ಎನ್ನುವುದು ಸೌಮ್ಯ ಶೆಟ್ಟಿಯ ವಾದ.

ಪದೇಪದೇ ಗಂಡನನ್ನು ಬದಲಿಸುವ ಈಕೆಗೆ ಮದುವೆಯಾದ ಬಳಿಕ ಗಂಡAದಿರ ನಡತೆಯೇ ಸರಿ ಇಲ್ಲ ಎನ್ನುವ ಖಯಾಲಿಯೇ ಎನ್ನುವಂತಾಗಿದೆ. ಸ್ಥಳೀಯ ಮೂಲಗಳ ಪ್ರಕಾರ ಈಕೆಗೆ ಸುದೀಪ್ ರೈ ಜೊತೆ ನಾಲ್ಕನೇಯ ಮದುವೆ ಎನ್ನುವ ಮಾತುಗಳು ಹರಿದಾಡುತ್ತಿದೆ. ಸೌಮ್ಯ ಶೆಟ್ಟಿಯ ಹೇಳಿಕೆಯ ಪ್ರಕಾರ ಈಕೆಯ ತನ್ನ ಪೂರ್ವಾಪರ ಸುದೀಪ್ ರೈಗೆ ಮೊದಲೇ ಗೊತ್ತಿತ್ತು ಎಂದಿದ್ದಾಳೆ. ಆದರೆ ಈಕೆ ಈ ಹಿಂದೆ ಮದುವೆಯಾದ ವಿಚಾರ ಹಾಗೂ ಆಕೆಯ ಕುಟುಂಬದ ಪೂರ್ವಾಪರ ಮೊದಲೇ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆ ಇರುತ್ತಿತ್ತೇ ಎನ್ನುವ ಪ್ರಶ್ನೆಯೂ ಮೂಡದೆ ಇರದು. ಇನ್ನೊಂದು ಪ್ರಮುಖ ವಿಚಾರ ಎಂದರೆ ಗಂಡ ಸುದೀಪ್ ರೈ ವಿಷ ಸೇವನೆ ಮಾಡಿದ ವಿಚಾರವೇ ತನಗೆ ಗೊತ್ತಿರಲಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಆಕೆಯ ಮಾತು ನಿಜವೇ ಎನ್ನುವ ಅನುಮಾನ ಮೂಡುವುದು ಸಹಜ. ಯಾಕೆಂದರೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದಾಗ ತಪಾಸಣೆಯಲ್ಲಿ ದೇಹದಲ್ಲಿ ವಿಷ ಸೇರಿಕೊಂಡ ವಿಚಾರ ವೈದ್ಯರಿಗೆ ತಿಳಿಯುತ್ತದೆ. ಆತ ವಿಷ ಸೇವಿಸಿದ ವಿಚಾರ ತಿಳಿದ್ದಿದ್ದರೂ ಆಕೆ ಗೌಪ್ಯವಾಗಿಟ್ಟಿರಬಹುದೇ ಎನ್ನುವ ಸಂಶಯ ಆತನ ಪೋಷಕರಿಗೆ ಕಾಡುವುದು ಸಹಜ. ಆಕೆ ಮಾಧ್ಯಮಗಳಲ್ಲಿ ನೀಡಿದ ಹೇಳಿಕೆಗಳಲ್ಲಿ ದ್ವಂದ್ವತೆ ಸ್ಪಷ್ಟವಾಗಿ ಕಾಣುತ್ತಿದೆ. ಸೌಮ್ಯ ಶೆಟ್ಟಿಯನ್ನು ಮದುವೆಯಾಗಿ ಕೈಯ ಮದರಂಗಿ ಬಣ್ಣ ಮಾಸುವ ಮುನ್ನವೇ ಕೇವಲ ಒಂದೇ ತಿಂಗಳ ಒಳಗಾಗಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಇದರ ಹಿಂದೆ ಬಲವಾದ ಕಾರಣ ಇಲ್ಲದಿರಲು ಸಾಧ್ಯವಿಲ್ಲ ಎನ್ನುವುದು ಆತನ ಕುಟುಂಬದವರ ಆರೋಪ.

ಒಟ್ಟಿನಲ್ಲಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣದಲ್ಲಿ ಸಾಕಷ್ಟು ಗೊಂದಲವಿದ್ದು,ಮದುವೆಯಾದ ಒಂದೇ ತಿಂಗಳಲ್ಲಿ ಸುದೀಪ್ ರೈ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈತನ ಸಾವಿಗೆ ನಿಜವಾದ ಕಾರಣ ಪೊಲೀಸರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *