ಕಾರ್ಕಳ: ವಾಟ್ಸಾಪ್ ಗ್ರೂಪ್ ನಲ್ಲಿ ಬಂದ ಸಂದೇಶವನ್ನು ನಂಬಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಾರ್ಕಳದ ವ್ಯಕ್ತಿಯೊಬ್ಬರೂ ಲಕ್ಷಾಂತರ ರೂ ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ರಮೇಶ್ (46) ಎಂಬವರು ಹಣ ಕಳೆದುಕೊಂಡವರು. ಅವರಿಗೆ ಕಳೆದ 15 ದಿನದ ಹಿಂದೆ ಷೇರು ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುವಂತೆ ವಾಟ್ಸಪ್ ಗ್ರೂಪ್ ಮೂಲಕ ಸಂದೇಶ ಬಂದಿತ್ತು. ಈ ಸಂದೇಶ ನಂಬಿದ ರಮೇಶ್ ಅವರು ಸುರೇಶ ಕುಮಾರ್ ಎಂಬವರ SBI ಬ್ಯಾಂಕಿನ ಖಾತೆಗೆ 10,87,755 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ರಮೇಶ್ ಅವರ ಮೊಬೈಲ್ ನಂಬರ್ ಹಾಗೂ ವಾಟ್ಸಾಪ್ ಗ್ರೂಪನಿಂದ ಬ್ಲಾಕ್ ಮಾಡಿ ರಮೇಶ್ ಅವರ ಹಣವನ್ನು ನೀಡದೇ ವಂಚಿಸಿದ್ದಾರೆ ಎಂದು ರಮೇಶ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











