Share this news

ಕಾರ್ಕಳ: ರಾಜಾಪುರ ಸಾರಸ್ವತ ಸಂಘ ಕಾರ್ಕಳ, ಮಹಾಲಕ್ಷ್ಮೀ   ದೇವಸ್ಥಾನ ಹಿರ್ಗಾನ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ ಹಾಗೂ ಎ.ಜೆ ಆಸ್ಪತ್ರೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.25 ರಂದು ಭಾನುವಾರ ಹಿರ್ಗಾನ ಲಕ್ಷ್ಮೀಪುರ  ಮಹಾಲಕ್ಷ್ಮೀ   ದೇವಸ್ಥಾನದಲ್ಲಿ ಬೆಳಗ್ಗೆ 8.30ರಿಂದ 1ರ ವರೆಗೆ ನಡೆಯಲಿದೆ.

 

ಈ ಆರೋಗ್ಯ ತಪಸಾಣಾ ಶಿಬಿರದಲ್ಲಿ ಹೃದಯರೋಗ ತಪಾಸಣೆ, ಇಸಿಜಿ, ಮಧುಮೇಹ,ರಕ್ತದೊತ್ತಡ, ಎದೆನೋವು,ಕಿ,ಮೂಗು, ಗಂಟಲು, ಥೈರಾಯಿಡ್, ಉಬ್ಬಸ,ಕಣ್ಣಿನ ಸಮಸ್ಯೆ ಮುಂತಾದ ವಿಭಾಗಗಳಲ್ಲಿ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    

 

             

Leave a Reply

Your email address will not be published. Required fields are marked *