Share this news

ಹೆಬ್ರಿ,ಡಿ.10: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ, ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ ಉಡುಪಿ, ಅಲಯನ್ಸ್ ಕ್ಲಬ್ ಉಡುಪಿ ರಾಯಲ್, ಗ್ರಾಮ ಪಂಚಾಯತ್ ಹೆಬ್ರಿ, ಸಮುದಾಯ ಅರೋಗ್ಯ ಕೇಂದ್ರ ಹೆಬ್ರಿ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಹೆಬ್ರಿ ಸ. ಆ. ಕೇಂದ್ರದಲ್ಲಿ ಡಿ. 9 ರಂದು ನಡೆಯಿತು.

ಅಲಯನ್ಸ್ ಜಿಲ್ಲೆ 275 ರ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲಿಯಾನ್ ರವರು ಮಾತನಾಡಿ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್, ಬೈಲೂರು ಮತ್ತು ಅವರ ವೈದ್ಯಕೀಯ ತಂಡ ಗ್ರಾಮೀಣ ಭಾಗದಲ್ಲಿ ಹಲವಾರು ಅರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ನಡೆಸಿ ಜನರಿಗೆ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕು. ಕಣ್ಣು ಗಳನ್ನು ಅರೋಗ್ಯವಾಗಿಡಲು ನಿಯಮಿತವಾಗಿ ಕಣ್ಣಿನ ತಪಾಸಣೆಗಳನ್ನು ಮಾಡಿಕೊಂಡು ಜೊತೆಗೆ ದೃಷ್ಟಿ ನಷ್ಟಕ್ಕೆ ಕಾರಣವಾಗುವ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ದಂತಹ ಕಾಯಿಲೆಗಳ ನಿಯಂತ್ರಿಸಲು ನಿಮ್ಮ ಅರೋಗ್ಯದ ಬಗ್ಗೆ ಗಮನ ಕೊಡಿ.ಚಿಕ್ಕ ಮಕ್ಕಳು ಮೊಬೈಲ್ ಬಳಕೆ ಮಾಡದಂತೆ ನಿರ್ಬಂಧಿಸಿದಾಗ ಮಕ್ಕಳಲ್ಲಿ ಕಾಣಬರುವ ದೃಷ್ಟಿ ಸಮಸ್ಯೆ ಯನ್ನು ಕಡಿಮೆ ಮಾಡಬಹುದು ಎಂದರು.

ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ ಸರಕಾರದ ಅರೋಗ್ಯ ಕಾರ್ಯಕ್ರಮದಲ್ಲಿ ಇತರ ಸಂಸ್ಥೆಗಳು ಭಾಗವಹಿಸಿ ಸಹಕರಿಸಿದಾಗ ಕಾರ್ಯಕ್ರಮಗಳು ಯಶಸ್ವಿ ಯಾಗಲು ಸಾಧ್ಯ. ಅಲಯನ್ಸ್ ಜಿಲ್ಲಾ ಗವರ್ನರ್ ಅಲೈ ಸುನೀಲ್ ಸಾಲಿಯಾನ್ ರವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮೆರಗು ನೀಡಿದ್ದಾರೆ. ಹಾಗೆಯೇ ದ್ವಿತೀಯ ಜಿಲ್ಲಾ ಗವರ್ನರ್ ಆಗಮಿಸಿ ಪ್ರೋತ್ಸಾಹಿಸಿದ್ದಾರೆ. ದೃಷ್ಟಿ ಸಮಸ್ಯೆ ಗಳಿಗೆ ಹಲವಾರು ಕಾರಣಗಳಿವೆ. ಮುಖ್ಯ ವಾದ ಅಂಶ ವೆಂದರೆ ಕಣ್ಣಿನ ಆರೈಕೆಯನ್ನು ಕಡೆಗಣಿಸುವುದು. ಬೇರೆ ಬೇರೆ ತರದ ದೃಷ್ಟಿ ದೋಷ ಬರುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಲು ತಜ್ಞ ನೇತ್ರ ತಜ್ಞರಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನ ಪಡಕೊಳ್ಳಿ. ಶಿಬಿರಕ್ಕೆ ಆಗಮಿಸಿ ಸಹಕಾರ ನೀಡಿದ ಅಲಯನ್ಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು .

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಲಯನ್ಸ್ ಸಂಸ್ಥೆ ಆರಂಭದ ಪ್ರತೀಕವಾಗಿ ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದ ಆವರಣದಲ್ಲಿ ಅಲಯನ್ಸ್ ಜಿಲ್ಲಾ ಗವರ್ನರ್ ಸುನೀಲ್ ಸಾಲಿಯಾನ್ ರವರು ಗಿಡ ನೆಟ್ಟರು.

ಅಲಯನ್ಸ್ ಕ್ಲಬ್ ದ್ವಿತೀಯ ಜಿಲ್ಲಾ ಗವರ್ನರ್ ಅಲೈ ಸುಧಾಕರ್. ಹೆಗ್ಡೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರಮಾಮಣಿ ಮತ್ತು ಡಾ. ಅರ್ಪಿತಾ ಹಾಗೂ ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾದ ರಾಮಚಂದ್ರ ಕೆ ಭಟ್ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಯ ಅಧ್ಯಕ್ಷೆ ಸುನೀತಾ ಹೆಬ್ಬಾರ್ ಕಾರ್ಯದರ್ಶಿ ಬಾಲಚಂದ್ರ. ಎಂ, ಹಾಗೂ ಜಿಲ್ಲಾ ಸಂಚಾರಿ ನೇತ್ರ ಘಟಕದ ವೈದ್ಯರಾದ ಡಾ. ಅಗ್ರಜ್ ಉಪಸ್ಥಿತರಿದ್ದರು.ಸ ಆ. ಕೇಂದ್ರ ಹೆಬ್ರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಚಿದಾನಂದ ಸ್ವಾಮಿ ಸ್ವಾಗತಿಸಿ ವಂದಿಸಿದರು.

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *