
ಹೆಬ್ರಿ,ಮಾ6: ಇಂದಿನ ಬಿಡುವಿಲ್ಲದ ಹಾಗೂ ಒತ್ತಡದ ಜೀವನದಲ್ಲಿ ಜನಸಾಮಾನ್ಯರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿದೆ. ಜನಸಾಮಾನ್ಯರ ಆರೋಗ್ಯದ ಸಮಸ್ಯೆಗಳ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೆಬ್ರಿಯ ಅನಂತ ಪದ್ಮನಾಭ ಫ್ರೆಂಡ್ಸ್ ವತಿಯಿಂದ ಉಡುಪಿಯ ಆದರ್ಶ ಆಸ್ಪತ್ರೆ ಹಾಗೂ ರಾಮ ಮಂದಿರದ ಜಂಟೀ ಸಹಯೋಗದಲ್ಲಿ ಮಾ 15ರಂದು ಹೆಬ್ರಿಯ ರಾಮ ಮಂದಿರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ತನಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಈ ಆರೋಗ್ಯ ತಪಸಣಾ ಶಿಬಿರದಲ್ಲಿ ಜನರ ಮೆಡಿಸಿನ್ ವಿಭಾಗದಿಂದ ಡಾ.ಉದಯ ಕುಮಾರ್ ಪ್ರಭು, ಚರ್ಮ ರೋಗ ವಿಭಾಗದ ಡಾ.ಅರುಣ್ ಶೆಟ್ಟಿ, ಮೂಳೆ ಮತ್ತು ಕೀಲು ವಿಭಾಗದ ಡಾ.ಮೋಹನ್ ದಾಸ್ ಶೆಟ್ಟಿ, ನರರೋಗ ಶಸ್ತçಚಿಕಿತ್ಸಾ ವಿಭಾಗದ ಡಾ.ರಾಜೇಶ್ ನಾಯರ್, ಪ್ರಸೂತಿ ಮತ್ತು ಸ್ತಿçà ರೋಗ ವಿಭಾಗದ ಡಾ.ರಂಜಿತಾ ಎಸ್,ನಾಯಕ್, ಹೃದ್ರೋಗ ವಿಭಾಗದ ಡಾ.ಸುಹಾಸ್,ಬಿ.ಸಿ, ನವಜಾತ ಶಿಶು ಮತ್ತು ಮಕ್ಳಳ ವಿಭಾಗದ ಡಾ.ಗುರುಪ್ರಸಾದ್ ಶೆಟ್ಟಿ, ತೆರೆದ ಹೃದಯ ಮತ್ತು ರಕ್ತನಾಳ ಶಸ್ತç ಚಿಕಿತ್ಸಾ ವಿಭಾಗದ ಡಾ.ಗುರುಪ್ರಸಾದ್ ಡಿ, ರೈ ಹಾಗೂ ಕ್ಯಾನ್ಸರ್ ಶಸ್ತç ಚಿಕಿತ್ಸಾ ವಿಭಾಗದ ಡಾ.ಅನಂತ,ಎಸ್ ಭಾಗವಹಿಸಲಿದ್ದಾರೆ.
ಈ ಶಿಬಿರದಲ್ಲಿ ಬಿಪಿ,ಶುಗರ್ ತಪಾಸಣೆ, ಹೃದಯದ ಇಸಿಜಿ, ಕೊಲೆಸ್ಟಾçಲ್, ಕಣ್ಣಿನ ತಪಾಸಣೆ ಸೇರಿದಂತೆ ಇತರೇ ಸಾಮಾನ್ಯ ರೋಗದ ತಪಾಸಣೆ ನಡೆಲಾಗುತ್ತದೆ ಹಾಗೂ 10 ದಿನಗಳ ಉಚಿತ ಔಷಧಿಯನ್ನು ನೀಡಲಾಗುತ್ತದೆ, ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಆದರ್ಶ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಆದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಅನಂತ ಪದ್ಮನಾಭ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷೆ ಸ್ಮಿತಾ ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆರೋಗ್ಯ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ 9945714812 ಗೆ ಕರೆ ಮಾಡಬಹುದಾಗಿದೆ


.
.
.
.
.
.
.
.
.
.
